'ಲಂಕೆ' ನನ್ನ ಮೊದಲ ಚಿತ್ರವೆಂಬಂತಹ ಭಾವನೆ: ಕೃಷಿ ತಾಪಂಡ
ರಾಮಪ್ರಸಾದ್ ನಿರ್ದೇಶನದ ಲಂಕೆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿ ಕೃಷಿ ತಾಪಂಡ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

ರಾಮಪ್ರಸಾದ್ ನಿರ್ದೇಶನದ ಲಂಕೆ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾದಲ್ಲಿ ಕೃಷಿ ತಾಪಂಡ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
ಸುದೀರ್ಘ ಸಮಯದ ನಂತರ ಮತ್ತೆ ಬೆಳ್ಳಿ ತೆರೆಗೆ ಎಂಟ್ರಿಯಾಗಿದ್ದಾರೆ. ಕೊರೋನಾ ಲಾಕ್ ಡೌನ್ ಮತ್ತು ಇತರ ಕಾರಣಗಳಿಗಾಗಿ ಸುಮಾರು ಎರಡೂವರೆ ವರ್ಷಗಳ ಕಾಲ ನನ್ನ ಯಾವುದೇ ಸಿನಿಮಾ ರಿಲೀಸ್ ಆಗಲಿಲ್ಲ. ಹೀಗಾಗಿ ಲಂಕೆ ಸಿನಿಮಾ ಮೂಲಕ ನಾನು ಪಾದಾರ್ಪಣೆ ಮಾಡುತ್ತಿರುವ ಭಾವನೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಗಣೇಶ ಚತುರ್ಥಿಯಂದು ಲಂಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ನನಗೆ ಇದು ಅತಿ ಹೆಚ್ಚು ವಿಶೇಷವಾಗಿದೆ. ಮೂರನೇ ಅಲೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮಗೆಲ್ಲಾ ಭಯವಾಗುತ್ತಿದೆ.
ಈ ಸಮಯದಲ್ಲಿ ಮತ್ತು 50 ಪ್ರತಿಶತದಷ್ಟು ಆಕ್ಯುಪೆನ್ಸಿಯೊಂದಿಗೆ ಲಂಕೆ ತಂಡವು ಚಿತ್ರವನ್ನು ಬಿಡುಗಡೆ ಮಾಡಬೇಕೋ ಬೇಡವೋ ಎಂಬ ಸಂಶಯವನ್ನು ಹೊಂದಿತ್ತು. ಆದರೆ ನಾವು 2019 ರ ಫೆಬ್ರವರಿಯಲ್ಲಿ ಲಂಕೆಯ ಚಿತ್ರೀಕರಣವನ್ನು ಮುಗಿಸಿದ್ದೆವು, ಆದ್ದರಿಂದ ಈಗ ನಾವು ಸಿನಿಮಾ ರಿಲೀಸ್ ಮಾಡಲು ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದು ಇತರ ಚಿತ್ರ ನಿರ್ಮಾಪಕರಿಗೆ ಥಿಯೇಟರ್ ಬಿಡುಗಡೆಗಳನ್ನು ಆಯ್ಕೆ ಮಾಡುವ ಭರವಸೆಯನ್ನು ನೀಡುತ್ತದೆ. ಅಂತೆಯೇ, ಪ್ರೇಕ್ಷಕರು ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸ್ವಲ್ಪ ಮನರಂಜನೆ ಪಡೆಯುವ ಸಮಯವಾಗಿದೆ.
ಲಂಕೆಯು ವಾಣಿಜ್ಯ ಚಿತ್ರವಾಗಿದ್ದು, ಪ್ರೀತಿ, ದ್ವೇಷ, ರಕ್ತ, ನಗು, ಸೆಂಟಿಮೆಂಟ್ ಮತ್ತು ಕೌಟುಂಬಿಕ ಕಥೆ ಒಳಗೊಂಡಿದೆ. "ಲಂಕೆ ಚಿತ್ರವು ಎರಡು ವಿಭಿನ್ನ ಕಾಲಗಳಲ್ಲಿ ಸೆಟ್ಟೇರಿದೆ. ಒಂದು 70 ಮತ್ತು 80 ರ ದಶಕದಲ್ಲಿ ಮತ್ತು ಇನ್ನೊಂದು ಸದ್ಯದ ಪರಿಸ್ಥಿತಿಯಾಗಿದೆ. ಕ್ಲೈಮ್ಯಾಕ್ಸ್ ಈ ಎರಡು ಯುಗಗಳನ್ನು ಸಂಪರ್ಕಿಸುತ್ತದೆ.
ಲಂಕೆಯ ಶೀರ್ಷಿಕೆ ನಮಗೆ ರಾಮಾಯಣ, ರಾಮ, ಸೀತೆ ಮತ್ತು ರಾವಣರನ್ನು ನೆನಪಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಈ ಪಾತ್ರಗಳ ಜೊತೆ ಇಂದಿಗೂ ಸಂಪರ್ಕ ಹೊಂದಿದ್ದಾನೆ. ಪ್ರತಿಯೊಬ್ಬರೂ ತಮ್ಮಲ್ಲಿ ರಾಮ ಮತ್ತು ರಾವಣರನ್ನು ಅಡಗಿಸಿಟ್ಟುಕೊಂಡು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯಿಸುತ್ತಾರೆ. ತಮ್ಮ ಪಾತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನ್ನದು ಪಕ್ಕದ ಮನೆಯ ಹುಡುಗಿಯ ರೀತಿಯ ಪಾತ್ರ ಎಂದು ಪರಿಚಯಿಸಲಾಗಿದೆ.
ಮೊಗಲ ಬಾರಿಗೆ ಜೊತೆ ಕೃಷಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇಬ್ಬರು ಬ್ಯಾಡ್ಮಿಂಟನ್ ಆಡುವಾಗ ಸ್ನೇಹಿತರಾಗಿದ್ದೇವು. ಇಬ್ಬರು ಒಟ್ಟಿಗೆ ನಟಿಸಲು ಕಾಯುತ್ತಿದ್ದೇವು. ಲಂಕೆಯಿಂದ ನಮಗೆ ಅವಕಾಶ ನೀಡಿದೆ. ಪರಿಚಯವವಿರುವವರ ಜೊತೆ ನಟಿಸಿದ್ದು ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಲು ಸಹಾಯವಾಯಿತು ಎಂದು ಹೇಳಿದ್ದಾರೆ. ಯೋಗಿ ಜೊತೆಗೆ ಸಂಚಾರಿ ವಿಜಯ್ ಕಾವ್ಯಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


