'ಶ್ರೀ ಜಗನ್ನಾಥ ದಾಸರು' ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ
ಪ್ರಸಿದ್ಧ ಹರಿದಾಸ ವಿದ್ವಾಂಸ ಡಾ. ಮಧುಸೂದನ್ ಹವಾಲ್ದಾರ್ ಅವರ ಕನ್ನಡ ಸಿನಿಮಾ ಶ್ರೀ ಜಗನ್ನಾಥ ದಾಸರು ಇತ್ತೀಚಿಗೆ ಸ್ಯಾನ್ ಫ್ರಾನ್ಸಿಸ್ಕೂ ಬೇ ಏರಿಯಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದರೂ ಭಾರತದ ಥಿಯೇಟರ್ ಗಳಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.

ಬೆಂಗಳೂರು: ಪ್ರಸಿದ್ಧ ಹರಿದಾಸ ವಿದ್ವಾಂಸ ಡಾ. ಮಧುಸೂದನ್ ಹವಾಲ್ದಾರ್ ಅವರ ಕನ್ನಡ ಸಿನಿಮಾ ಶ್ರೀ ಜಗನ್ನಾಥ ದಾಸರು ಇತ್ತೀಚಿಗೆ ಸ್ಯಾನ್ ಫ್ರಾನ್ಸಿಸ್ಕೂ ಬೇ ಏರಿಯಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದರೂ ಭಾರತದ ಥಿಯೇಟರ್ ಗಳಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.
ಶ್ರೀ ಜಗನ್ನಾಥ ದಾಸರು ಸಿನಿಮಾ, ಪುರಂದರ ದಾಸರು, ವಿಜಯದಾಸರು ಮತ್ತು ಶ್ರೀ ಗೋಪಾಲ ದಾಸರು ಸೇರಿದಂತೆ ಪ್ರಸಿದ್ಧ ನಾಲ್ವರು ಹರಿದಾಸರ ಜೀವನ ಹಾಗೂ ಭಕ್ತಿ ಚಳವಳಿಯ ಕಥಾ ಹಂದರವನ್ನು ಹೊಂದಿದೆ. ಮಾತಾಂಬುಜಾ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೈತ್ರಿ ಹೆರಿಟೇಜ್, ವಿವಿ ಜೋಶಿ ಮತ್ತು ಶ್ರೀನಾಥ್ ರಾವ್ ಸಹ ನಿರ್ಮಾಪಕರಾಗಿದ್ದಾರೆ.
ಶರತ್ ಜೋಷಿ ಶ್ರೀ ಜಗನ್ನಾಥ ದಾಸರು ಪಾತ್ರದಲ್ಲಿ ಅಭಿನಯಿಸಿದ್ದಾರೆ. ತ್ರಿವಿಕ್ರಮ್ ಜೋಷಿ- ವಿಜಯದಾಸರು, ಪ್ರಭಾಂಜನ್ ದೇಶಪಾಂಡೆ- ಗೋಪಾಲ ದಾಸರು ಪಾತ್ರದಲ್ಲಿ ನಟಿಸಿದ್ದಾರೆ.
ಐತಿಹಾಸಿಕ ಭಕ್ತಿ ಪ್ರದಾನ ಚಿತ್ರವನ್ನು ಹಂಪಿ, ಆನೆಗುಂದಿ, ಗುವಾಹಟಿ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


