ಸಿನಿಮಾ ಸುದ್ದಿ

ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರದ ಆಡಿಯೋ ಹಕ್ಕು ಟಿ-ಸೀರೀಸ್ ಸಂಸ್ಥೆಗೆ!

ಜಯತೀರ್ಥ ನಿರ್ದೇಶನದ ಬಹುಭಾಸಾ ಸಿನಿಮಾ ಬನಾರಸ್ ಸಿನಿಮಾ ಆಡಿಯೋ ಹಕ್ಕು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ಪಾಲಾಗಿದೆ.

ಜಯತೀರ್ಥ ನಿರ್ದೇಶನದ 'ಬನಾರಸ್' ಚಿತ್ರದ ಆಡಿಯೋ ಹಕ್ಕು ಟಿ-ಸೀರೀಸ್ ಸಂಸ್ಥೆಗೆ!
ಬನಾರಸ್ ಆಡಿಯೋ ಟಿ ಸಿರೀಸ್ ಪಾಲು
Published On :

ಜಯತೀರ್ಥ ನಿರ್ದೇಶನದ ಬಹುಭಾಸಾ ಸಿನಿಮಾ ಬನಾರಸ್ ಸಿನಿಮಾ ಆಡಿಯೋ ಹಕ್ಕು ಟಿ ಸಿರೀಸ್ ಮತ್ತು ಲಹರಿ ಸಂಸ್ಥೆ ಪಾಲಾಗಿದೆ.

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟಿಸಿರುವ ಬನಾರಸ್ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಜೈದ್ ಖಾನ್ ಗೆ ಸೋನಾಲ್ ಮಾಂಟೆರಿಯೋ ನಾಯಕಿಯಾಗಿದ್ದಾರೆ.

ವಾರಣಾಸಿಯ ಹಿನ್ನೆಲೆಯಲ್ಲಿ ನಿರ್ಮಿಸಲಾದ ಬನಾರಸ್, ದೈವಿಕ ಮತ್ತು ದೆವ್ವ, ಶುದ್ಧತೆ ಮತ್ತು ಕಲಬೆರಕೆಯ ವ್ಯಾಖ್ಯಾನಗಳ ಸುತ್ತ ಸುತ್ತುತ್ತದೆ. ಬನಾರಸ್' ಚಿತ್ರವನ್ನು ಆರಂಭಿಸಿದಾಗ ಇದು ಕನ್ನಡದ ಚಿತ್ರವಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಿರ್ಮಾಪಕರು ಚಿತ್ರವನ್ನು ನೋಡಿ ಕಾಶಿಯ ಹಿನ್ನೆಲೆಯ ಕಥಾವಸ್ತುವಿದು, ಎಲ್ಲಾ ಭಾಷೆಯ ಜನರಿಗೂ ಕೂಡ ಅನ್ವಯಿಸುತ್ತದೆ ಮತ್ತು ತಲುಪಿಸಲು ಸರಿಯಾದ ಚಿತ್ರವೆಂದು ಭಾವಿಸಿ ಈಗ ಇದನ್ನು ಈಗ 5 ಭಾಷೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಬಹುತೇಕ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಬಹುದು.

ಈಗಾಗಲೇ ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ, ಟಿ-ಸೀರಿಸ್ ದೊಡ್ಡ ಮೊತ್ತಕ್ಕೆ ಖರೀದಿಸಿವೆ. ಚಿತ್ರದ ಮೋಷನ್ ಪೋಸ್ಟರ್ ನವಂಬರ್ 17ರಂದು ಬಿಡುಗಡೆಗೊಳಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.