ಸಿನಿಮಾ ಸುದ್ದಿ

ಕಾಲಿವುಡ್ ಹಿರಿಯ ನಟ, ಲೇಖಕ ವೆಂಕಟ್ ಶುಭ ಕೊರೋನಾದಿಂದ ನಿಧನ

ಜನಪ್ರಿಯ ತಮಿಳು ನಟ, ನಿರ್ಮಾಪಕ ಮತ್ತು ಲೇಖಕ ವೆಂಕಟ್ ಶುಭ ಮೇ 29 ರಂದು ಬೆಳಿಗ್ಗೆ 12.48 ಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಕಳೆದ ಹತ್ತು ದಿನಗಳಿಂದ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದರು.

ಕಾಲಿವುಡ್ ಹಿರಿಯ ನಟ, ಲೇಖಕ ವೆಂಕಟ್ ಶುಭ ಕೊರೋನಾದಿಂದ ನಿಧನ
ವೆಂಕಟ್ ಶುಭ
Published On :

ಜನಪ್ರಿಯ ತಮಿಳು ನಟ, ನಿರ್ಮಾಪಕ ಮತ್ತು ಲೇಖಕ ವೆಂಕಟ್ ಶುಭ ಮೇ 29 ರಂದು ಬೆಳಿಗ್ಗೆ 12.48 ಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಕಳೆದ ಹತ್ತು ದಿನಗಳಿಂದ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿದ್ದರು. 

ಅವರ ಆಪ್ತ ಸ್ನೇಹಿತ ಮತ್ತು ಅಮ್ಮಾ ಕ್ರಿಯೇಷನ್ಸ್ ಟಿ ಶಿವ ಈ ವಿಚಾರ ಹೇಳಿಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವ "ಸುಮಾರು 10 ದಿನಗಳ ಹಿಂದೆ, ವೆಂಕಟ್ ಶುಭ ಕೊರೋನಾಗೆ ತುತ್ತಾಗಿದ್ದರು.ಅವರನ್ನು ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವರದಿಯ ಪ್ರಕಾರ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು, ನಂತರ ಅವರನ್ನು ಐಸಿಯು (ತೀವ್ರ ನಿಗಾ ಘಟಕ) ಕ್ಕೆ ಸ್ಥಳಾಂತರಿಸಲಾಯಿತು. ಆದರೆ, ಮೇ 29 ರಂದು ಬೆಳಿಗ್ಗೆ 12.48 ಕ್ಕೆ ಅವರು .ಸ್ವರ್ಗೀಯ ವಾಸಸ್ಥಾನಕ್ಕೆ ತೆರಳಿದ್ದನ್ನು ಎಲ್ಲರಿಗೂ ತಿಳಿಸಲು ನಾನು ವಿಷಾದಿಸುತ್ತೇನೆ." ಎಂದಿದ್ದಾರೆ.

ಶರತ್‌ಕುಮಾರ್, ಪ್ರಕಾಶ್ ರಾಜ್ ಸೇರಿದಂತೆ ಅನೇಕ ಗಣ್ಯರು ವೆಂಕಟ್ ಶುಭ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.