ಸಿನಿಮಾ ಸುದ್ದಿ

'ಪೆಂಟಗಾನ್' ಮೂಲಕ ನಟನೆಗಿಳಿದ ಪ್ರೀತಿಕಾ ದೇಶಪಾಂಡೆ

ಪ್ರೀತಿಕಾ ದೇಶಪಾಂಡೆ "ಪೆಂಟಗಾನ್"ನ ಮೂಲಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐದು ಕಥೆಗಳನ್ನು ಒಳಗೊಂಡ ಈ ಚಲನಚಿತ್ರ ಕಿರಣ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ಆಗಿರಲಿದೆ.

'ಪೆಂಟಗಾನ್' ಮೂಲಕ ನಟನೆಗಿಳಿದ ಪ್ರೀತಿಕಾ ದೇಶಪಾಂಡೆ
ಪ್ರೀತಿಕಾ ದೇಶಪಾಂಡೆ
Published On :

ಪ್ರೀತಿಕಾ ದೇಶಪಾಂಡೆ "ಪೆಂಟಗಾನ್"ನ ಮೂಲಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐದು ಕಥೆಗಳನ್ನು ಒಳಗೊಂಡ ಈ ಚಲನಚಿತ್ರ ಕಿರಣ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ಆಗಿರಲಿದೆ.

ಪ್ರೀತಿಕಾ ತಮ್ಮ ಪತಿ ಗುರು ದೇಶಪಾಂಡೆ ಅವರ ಪ್ರೊಡಕ್ಷನ್ ಹೌಸ್, ಜಿ ಸಿನೆಮಾಸ್ ಜೊತೆ ಇದ್ದರೂ ಅವರು ಈ ಚಿತ್ರದೊಂದಿಗೆ ಕ್ಯಾಮೆರಾವನ್ನು ಎದುರಿಸಲಿದ್ದಾರೆ. ಹೀಗಾಗಿ ಅವರ 15 ವರ್ಷದ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ನಟಿ ಹೇಳಿದಂತೆ ಕಥೆ ಮತ್ತು ಪಾತ್ರ ಆಕೆಯನ್ನು ನಟನೆಗೆ ಪ್ರೇರಿಸಿದೆ.

ನಟಿಯ ಜನ್ಮದಿನದಂದು ತಯಾರಕರು ಫಸ್ಟ್-ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಕಥೆಯನ್ನು 1980 ರ ದಶಕದ ಮಧ್ಯಭಾಗಕ್ಕೆ ಅಳವಡಿಸಲಾಗಿದೆ. ಸಕಲೇಶಪುರ ಮತ್ತು ಸುತ್ತಮುತ್ತ ಚಿತ್ರೀಕರಿಸಿರುವ ಚಿತ್ರದ ನಿರ್ದಿಷ್ಟ ಭಾಗದಲ್ಲಿ ನಟರಾದ ರವಿಶಂಕರ್, ವಂಶಿ ಕೃಷ್ಣ, ಮತ್ತು ಅನುಷಾ ರಾಯ್ ಸಹ ಪಾತ್ರವರ್ಗದಲ್ಲಿದ್ದಾರೆ. ಅಭಿಲಾಶ್ ಅವರ ಛಾಯಾಗ್ರಹಣ ಸಿನಿಮಾಗಿದೆ.

ಇತರ ಕಥೆಗಳನ್ನು ರಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರಮೋಹನ್ ಮತ್ತು ಗುರು ದೇಶಪಾಂಡೆ ನಿರ್ದೇಶಿಸಿದ್ದಾರೆ. ಇನ್ನು ಒಂದು ಕಥೆಯ ಶೂಟಿಂಗ್ ಬಾಕಿ ಉಳಿಸಿಕೊಂಡಿರುವ ತಯಾರಕರು , ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಅವಲೋಕಿಸಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.