ಸಿನಿಮಾ ಸುದ್ದಿ

ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್‌ ಅಲ್ಲ: ರಶ್ಮಿಕಾ ಮಂದಣ್ಣ

ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯಾಗಿದ್ದರೂ, ಕ್ಯಾಪ್ಟನ್‌ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ ಅಲ್ಲ ಎಂದು ಕನ್ನಡದ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟರ್‌ ಅಲ್ಲ: ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
Published On :

ಚೆನ್ನೈ: ತಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯಾಗಿದ್ದರೂ, ಕ್ಯಾಪ್ಟನ್‌ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ ಅಲ್ಲ ಎಂದು ಕನ್ನಡದ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಸಿನಿಮಾದಲ್ಲಿ ತಾವು ಎಷ್ಟೇ ಬ್ಯುಸಿಯಾಗಿದ್ದರೂ, ಮಿಸ್‌ಮಾಡದೆ ಐಪಿಎಲ್ ಪಂದ್ಯಗಳನ್ನು ನಿಯಮಿತವಾಗಿ ಫಾಲೋ ಮಾಡುತ್ತಿರುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಆರ್ ಸಿಬಿ ಈ ವರ್ಷ ಐಪಿಎಲ್ ಟೈಟಲ್‌ ಗೆದ್ದುಕೊಳ್ಳಲಿದೆ ಎಂದು ಕೊಂಡಿದ್ದೆ. ಆದರೆ, ಅನಿರೀಕ್ಷಿತ  ಪರಿಸ್ಥಿತಿಗಳಲ್ಲಿ ಲೀಗ್ ಮುಂದೂಡಿದ್ದರಿಂದ ತುಂಬಾ ಬೇಸರವಾಗಿದೆ ಎಂದು ಅವರು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ನನ್ನ ಅಚ್ಚು ಮೆಚ್ಚಿನ  ತಂಡ.  ಆದರೆ,  ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟ್‌ ಆಟಗಾರನಲ್ಲ. ನಾನು ಟೀಮ್ ಇಂಡಿಯಾ ಮಾಜಿ  ನಾಯಕ,  ಐಪಿಎಲ್‌ ಚೆನ್ನೈ ತಂಡದ  ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದೊಡ್ಡ ಅಭಿಮಾನಿ. ನನಗೆ ಧೋನಿ ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಹಾಗೂ ನಾಯಕತ್ವ ತುಂಬಾ ಇಷ್ಟ. ಅವರೊಬ್ಬ ಮಾಸ್ಟರ್ ಕ್ಲಾಸ್ ಆಟಗಾರ. “ಕ್ರಿಕೆಟ್‌ನಲ್ಲಿ ಧೋನಿ ನನ್ನ ಆಲ್‌ಟೈಮ್‌ಹೀರೋ " ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.