ಪಿಸಿ ಶೇಖರ್ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದಲ್ಲಿ ಮಾನ್ವಿತಾ ಕಾಮತ್ ನಾಯಕಿ
ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪಿಸಿ ಶೇಖರ್ ಅವರು ಹೊಸ ಪ್ರಾಜೆಕ್ಟ್ ವೊಂದನ್ನು ಕೆಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯಲ್ಲಿ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ನಿರ್ದೇಶಕ ಪಿಸಿ ಶೇಖರ್ ಅವರು ಹೊಸ ಪ್ರಾಜೆಕ್ಟ್ ವೊಂದನ್ನು ಕೆಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದರಂತೆ ಕೊರೋನಾ ಲಾಕ್‌ಡೌನ್‌ನಿಂದ ಬಹಳ ಸೈಲೆಂಟ್ ಆಗಿದ್ದ ನಟಿ ಮಾನ್ವಿತಾ ಕಾಮತ್ ಅವರು, ಇದೀಗ ಪಿಸಿ ಶೇಖರ್ ಅವರ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರದೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ.
ಉತ್ತಮ ಅಭಿನಯದ ಸಾಮರ್ಥ್ಯ, ಅನುಭವ ಇರುವ ನಟಿಗಾಗಿ ಹುಡುಕಾಡುತ್ತಿದ್ದೆ. ಬಳಿಕ ಮಾನ್ವಿತಾ ಅವರೇ ಸೂಕ್ತ ಎನಿಸಿತು ಎಂದು ನಿರ್ದೇಶಕ ಶೇಖರ್ ಅವರು ಹೇಳಿದ್ದಾರೆ.
ಈ ಚಿತ್ರದ ಮೂಲಕ ಮತ್ತೆ ಅರ್ಜುನ್ ಜನ್ಯ ಅವರು ಶೇಖರ್ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಲಿದ್ದಾರೆ. ಪಿಸಿ ಶೇಖರ್ ಅವರ ಈ ಹಿಂದಿನ ಎಲ್ಲಾ ಚಿತ್ರಗಳಿಗೂ ಜನ್ಯ ಸಂಗೀತ ನೀಡಿದ್ದರು. ಇನ್ನು ಶಕ್ತಿ ಶೇಖರ್ ಛಾಯಾಗ್ರಾಹಕಾರಗಿ ಕೆಲಸ ಮಾಡುತ್ತಿದ್ದು, ಸಚಿನ್ ಜಗದೀಶ್ವರ್ ಎಸ್‌ಬಿ ಸಂಭಾಷಣೆ ನೀಡುತ್ತಿದ್ದಾರೆ. ಕಲಾ ವಿಭಾಗದಲ್ಲಿ ರಾಜಶೇಖರ ಕೆಲಸ ಮಾಡಲಿದ್ದಾರೆ. ಸಚಿನ್ ಜಗದೀಶ್ವರ್ ಈ ಹಿಂದೆ 'ರಾಗ' ಮತ್ತು 'ದಿ ಟೆರರಿಸ್ಟ್' ಅಂತಹ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು.
ಚಿತ್ರಕ್ಕೆ ಸದ್ಯ ನಾಯಕಿಯನ್ನು ಮಾತ್ರ ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರು ಆಗಸ್ಟ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡುವ ಯೋಜನೆ ಹೊಂದಿದ್ದಾರೆ. ಇನ್ನುಳಿದಂತೆ ನಾಯಕನಟ ಹಾಗೂ ಪೋಷಕ ಕಲಾವಿದರ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸದ್ಯದಲ್ಲೇ ಈ ಪಾತ್ರಗಳನ್ನು ಸಹ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಮಾನ್ವಿತಾ ಅವರ ಶಿವ 143 ಮತ್ತು ಕನ್ನಡ-ಮರಾಠಿ ದ್ವಿಭಾಷಾ ಚಿತ್ರವಾದ ರಾಜಸ್ಥಾನ ಡೈರೀಸ್ ಚಿತ್ರಗಳು ಬಿಡುಗಡೆಗೆ ತುಂದಿಗಾಲಲ್ಲಿ ನಿಂತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


