ಆ.15ಕ್ಕೆ ಸೆಟ್ಟೇರಲಿದೆ ಧ್ರುವ ಸರ್ಜಾ-ಎಪಿ ಅರ್ಜುನ್ ಹೊಸ ಚಿತ್ರ
ಉದಯ್ ಕೆ. ಮೆಹ್ತಾ ನಿರ್ಮಾಣದ ಹೊಸ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ಎಪಿ ಆರ್ಜುನ್ ಮತ್ತೆ ಒಂದಾಗುತ್ತಿದ್ದು, ಆಗಸ್ಟ್ 15 ರಂದು ಚಿತ್ರ ಸೆಟ್ಟೇರಲಿದೆ.

ಉದಯ್ ಕೆ. ಮೆಹ್ತಾ ನಿರ್ಮಾಣದ ಹೊಸ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ಎಪಿ ಆರ್ಜುನ್ ಮತ್ತೆ ಒಂದಾಗುತ್ತಿದ್ದು, ಆಗಸ್ಟ್ 15 ರಂದು ಚಿತ್ರ ಸೆಟ್ಟೇರಲಿದೆ.
ಜುಲೈ.7 ರಂದು ನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್'ಗೆ ಪೂಜೆ ನೆರವೇರಿಸಿದ್ದ ಚಿತ್ರದ ತಂಡ, ಸಿನಿಮಾ ಕುರಿತು ಸಣ್ಣ ಮಾಹಿತಿ ನೀಡಿತ್ತು. ಇದೀಗ ಆಗಸ್ಟ್ 15 ರಿಂದ ಚಿತ್ರದ ಚಿತ್ರೀಕರಣ ಆರಂಭಿಸಲು ಭರ್ಜರಿ ತಯಾರಿ ನಡೆಸಿದೆ.
ಈ ನಡುವೆ ಚಿತ್ರದ ಫೋಟೋಶೂಟ್ ನಲ್ಲೂ ಧ್ರುವಸರ್ಜಾ ಅವರು ಪಾಲ್ಗೊಂಡಿದ್ದು, ಚಿತ್ರ ಬಿಡುಗಡೆ ಸಂದರ್ಭದಲ್ಲಿ ಈ ಚಿತ್ರಗಳು ಬಿಡುಗಡೆಗೊಳ್ಳಲಿವೆ ಎನ್ನಲಾಗುತ್ತಿದೆ.
ಆಗಸ್ಟ್ 15 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 30 ದಿನಗಳ ವರೆಗೂ ನಡೆಯಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.
ಪ್ರಸ್ತುತ ಅದ್ಧೂರಿ ಲವರ್ ಚಿತ್ರದಲ್ಲಿ ಕಾರ್ಯಮಗ್ನರಾಗಿರುವ ನಿರ್ದೇಶಕ ಎಪಿ ಅರ್ಜುನ್ ಅವರು, ಇದೇ ವೇಳೆ ಮುಂದಿನ ಚಿತ್ರದ ಕೆಲಸಗಳನ್ನೂ ಏಕಕಾಲದಲ್ಲಿ ಮಾಡುತ್ತಿದ್ದಾರೆ. ಈ ನಡುವೆ ಚಿತ್ರತಂಡ ಚಿತ್ರಕ್ಕೆ ದೊಡ್ಡ ತಾರಾಬಳಗವನ್ನೇ ತರಲು ಸಜ್ಜಾಗುತ್ತಿದೆ.
ಧ್ರುವ ಸರ್ಜಾರನ್ನು ನಾಯಕ ನಟನನ್ನಾಗಿ ಲಾಂಚ್ ಮಾಡಿದ್ದು ನಿರ್ದೇಶಕ ಎ.ಪಿ.ಅರ್ಜುನ್. ಇವರೇ ನಿರ್ದೇಶಿಸಿದ್ದ 'ಅದ್ಧೂರಿ' ಸಿನಿಮಾದ ಮೂಲಕ ಧ್ರುವ ಸರ್ಜಾ ಸಿನಿಮಾ ನಟನೆಗೆ ಕಾಲಿಟ್ಟರು. 'ಅದ್ಧೂರಿ' ಸಿನಿಮಾ ಬಿಡುಗಡೆ ಆಗಿ 9 ವರ್ಷಗಳು ಕಳೆದಿದ್ದು, ಇದೀಗ ಮತ್ತೆ ಹೊಸ ಚಿತ್ರದ ಮೂಲಕ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಒಂದಾಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


