ಜೇಮ್ಸ್ ಗೆ ಜೊತೆಯಾದ 'ಘಟೋತ್ಕಚ' ಖ್ಯಾತಿಯ ಕೇತನ್ ಕರಾಂಡೆ
ಮಹಾಭಾರತ ಧಾರಾವಾಹಿಯ 'ಘಟೋತ್ಕಚ' ಖ್ಯಾತಿಯ ದೈತ್ಯ ಪ್ರತಿಭೆ ಕೇತನ್ ಕರಾಂಡೆ ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರತಂಡ ಸೇರಿಕೊಂಡಿದ್ದಾರೆ.

ಬೆಂಗಳೂರು: ಮಹಾಭಾರತ ಧಾರಾವಾಹಿಯ 'ಘಟೋತ್ಕಚ' ಖ್ಯಾತಿಯ ದೈತ್ಯ ಪ್ರತಿಭೆ ಕೇತನ್ ಕರಾಂಡೆ ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರತಂಡ ಸೇರಿಕೊಂಡಿದ್ದಾರೆ.
ನಿರ್ದೇಶತ ಚೇತನ್ ಕುಮಾರ್ ನಿರ್ದೇಶನ ಜೇಮ್ಸ್ ಚಿತ್ರದಲ್ಲಿ ಕೇತನ್ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಜುಲೈ 5ರಿಂದ ಜೇಮ್ಸ್ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಈಗಾಗಲೇ ಕೇತನ್ ಚಿತ್ರತಂಡ ಸೇರಿಕೊಂಡಿದ್ದಾರೆ. ಸಾಹಸ ನಿರ್ದೇಶಕರಾದ ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನದ ಅಡಿಯಲ್ಲಿ ಕೇತನ್ ಹಲವು ಸಾಹಸ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಹಿಂದಿ, ಮರಾಠಿ ಮತ್ತು ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಸೂರ್ಯಪುತ್ರ ಕರ್ಣದಲ್ಲಿ ಭೀಮನ ಪಾತ್ರ ಪೋಷಿಸಿದ್ದ ಕೇತನ್, ಮಹಾಭಾರತ ಧಾರಾವಾಹಿಯಲ್ಲಿ ಭೀಮನ ಪುತ್ರ ಘಟೋತ್ಕಚ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ಇದೇ ಚೇತನ್ ರ ಭರ್ಜರಿ ಚಿತ್ರದಲ್ಲೂ ಕೇತನ್ ಪ್ರಮುಖ ಪಾತ್ರ ನಿಭಾಯಿಸಿದ್ದರು. ಇದೀಗ 2ನೇ ಬಾರಿಗೆ ಈ ಜೋಡಿ ಒಂದಾಗಿದೆ.
ಇನ್ನು ಜೇಮ್ಸ್ ಚಿತ್ರ ಟಾಕಿ ಭಾಗ ಸೇರಿದಂತೆ ಇನ್ನೂ ಶೇ.30ರಷ್ಟು ಚಿತ್ರೀಕರಣ ಬಾಕಿ ಇದ್ದು, ಫೈಟ್ ಮತ್ತು ಹಾಡಿನ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಜೇಮ್ಸ್ ಚಿತ್ರದ ಮೂಲಕ ಚೇತನ್ ಮತ್ತು ಪುನೀತ್ ರಾಜ್ ಕುಮಾರ್ ಜೊಡಿ ಮೊದಲಬಾರಿಗೆ ಒಂದಾಗಿದೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರು ನಿರ್ಮಾಣದ ಹೊಣೆ ಹೊತ್ತಿದ್ದು, ಜೇಮ್ಸ್ ಚಿತ್ರ ಪ್ರಸ್ತುತ ಕನ್ನಡ ಸಿನಿರಂಗದ ಮೋಸ್ಟ್ ಆ್ಯಂಟಿಸಿಪೇಟೆಡ್ ಚಿತ್ರಗಳ ಪಟ್ಟಿಗೆ ಸೇರಿದೆ. ಪುನೀತ್, ಕೇತನ್ ಅಲ್ಲದೇ ಚಿತ್ರದಲ್ಲಿ ಪ್ರಿಯಾ ಆನಂದ್, ತೆಲುಗು ನಟ ಶ್ರೀಕಾಂತ್, ಆದಿತ್ಯಾ ಮೆನನ್, ಅನು ಪ್ರಭಾಕರ್, ರಂಗಾಯಣ ರಘು, ಮತ್ತು ಮುಖೇಶ್ ರಿಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಜೆ ಸ್ವಾಮಿ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


