ಕನ್ನಡ ಕಾಮಿಡಿ ಚಲನಚಿತ್ರ “ಇಕ್ಕಟ್” ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ
ಕನ್ನಡ ಕಾಮಿಡಿ ಚಲನಚಿತ್ರ “ಇಕ್ಕಟ್” ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜನಪ್ರಿಯ ನಟರಾದ ನಾಗಭೂಷಣ ಮತ್ತು ಭೂಮಿ ಶೆಟ್ಟಿಯವರು ನಟಿಸಿದ್ದಾರೆ ಮತ್ತು ಇಶಮ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ್ದಾರೆ.

ಬೆಂಗಳೂರು: ಕನ್ನಡ ಕಾಮಿಡಿ ಚಲನಚಿತ್ರ “ಇಕ್ಕಟ್” ಜುಲೈ 21 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜನಪ್ರಿಯ ನಟರಾದ ನಾಗಭೂಷಣ ಮತ್ತು ಭೂಮಿ ಶೆಟ್ಟಿಯವರು ನಟಿಸಿದ್ದಾರೆ ಮತ್ತು ಇಶಮ್ ಮತ್ತು ಹಸೀನ್ ಖಾನ್ ನಿರ್ದೇಶಿಸಿದ್ದಾರೆ.
ಪವನ್ ಕುಮಾರ್ ಸ್ಟುಡಿಯೋಸ್ ಚಲನಚಿತ್ರ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ರವರ, ಇಕ್ಕಟ್ ಚಲನಚಿತ್ರ, ಲಾಕ್‌ಡೌನ್ ಮಧ್ಯದಲ್ಲಿ ಶುರುವಾದ ಒಂದು ಕಥೆಯಾಗಿದೆ. ಇಕ್ಕಟ್ ಪದದ ಅರ್ಥವು ಲಾಕ್‌ಡೌನ್‌ನಂತೆಯೇ ‘ಬಿಗಿಯಾದ ಪರಿಸ್ಥಿತಿಯಲ್ಲಿರುವುದು,ವಿಚ್ಛೇದನ ಬಯಸುತ್ತಿರುವ ದಂಪತಿಗಳ ಸುತ್ತ ಈ ಕಥೆ ಸುತ್ತುತ್ತದೆ.
ಅಂದರೆ ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದಾಗ ಅವರು ಅನ್ಯಮಾರ್ಗವಿಲ್ಲದೆ ಪರಸ್ಪರ ಒಟ್ಟಿಗೆ ಸಮಯ ಕಳೆಯುವಂತಾಗುತ್ತದೆ. ಆಗ ನಡೆಯುವ ಘಟನೆಗಳೇ ಈ ಸಿನಿಮಾದ ಕಥೆ. ಕೆಲವು ಸಾಂದರ್ಭಿಕ ಲಾಕ್‌ಡೌನ್ ಅನುಭವಗಳೊಂದಿಗೆ, ಈ ಚಿತ್ರವು ವೀಕ್ಷಕರನ್ನು ಹಾಸ್ಯ ಲೋಕಕ್ಕೆ ಕರೆದೊಯ್ಯಲು ಸಜ್ಜಾಗಿದೆ.
ಈ ಚಿತ್ರದಲ್ಲಿ ನಾಗಭೂಷಣ ಮತ್ತು ಭೂಮಿ ಶೆಟ್ಟಿಯವರೊಂದಿಗೆ, ಆರ್ ಜೆ ವಿಕಿ, ಸುಂದರ್ ವೀಣಾ, ಆನಂದ್ ನಿನಾಸಮ್ ಮತ್ತು ನವೀನ್ ಚೆಥಾನ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇಕ್ಕಟ್ 21ನೇ ಜುಲೈ 2021 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ಲೋಬಲ್ ರಿಲೀಸ್ ಆಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


