ಸಿನಿಮಾ ಸುದ್ದಿ

ಉಗ್ರ ನಿಗ್ರಹ ದಳ ಅಧಿಕಾರಿಯಾಗಿ ಬೆಳದಿಂಗಳ ಬಾಲೆ ಸುಮನ್ ನಗರ್ಕರ್: ಕಿಶೋರ್ ಭಾರ್ಗವ್ ನಿರ್ದೇಶನದ ಸ್ಟಾಕರ್ ಸಿನಿಮಾ

ಸ್ಟಾಕರ್ ಸಿನಿಮಾದ ಕಥೆ ಎಟಿಎಸ್ ಅಧಿಕಾರಿ ಪಾತ್ರದ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುತ್ತದೆ, ಹೀಗಾಗಿ ಈ ಪ್ರಮುಖ ಪಾತ್ರಕ್ಕೆ ನಟಿ ಸುಮನ್ ನಗರ್ಕರ್ ಬಿಟ್ಟರೆ ಮತ್ತಾವ ನಟಿಯೂ ನೆನಪಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ ಕಿಶೋರ್.

ಉಗ್ರ ನಿಗ್ರಹ ದಳ ಅಧಿಕಾರಿಯಾಗಿ ಬೆಳದಿಂಗಳ ಬಾಲೆ ಸುಮನ್ ನಗರ್ಕರ್: ಕಿಶೋರ್ ಭಾರ್ಗವ್ ನಿರ್ದೇಶನದ ಸ್ಟಾಕರ್ ಸಿನಿಮಾ
ಸ್ಟಾಕರ್ ಸಿನಿಮಾದಲ್ಲಿ ನಟಿ ಸುಮನ್ ನಗರ್ಕರ್
Published On :

ಕಿಶೋರ್ ಭಾರ್ಗವ್ ಅವರು ನಿರ್ದೇಶಿಸಿ, ರಾಮ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸ್ಟಾಕರ್ (Stalker) ಕನ್ನಡ ಸಿನಿಮಾದಲ್ಲಿ ಬೆಳದಿಂಗಳ ಬಾಲೆ ಖ್ಯಾತಿಯ ನಟಿ ಸುಮನ್ ನಗರ್ಕರ್ ಅವರು ಎಟಿಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಕಿಶೋರ್ ಅವರು ಈ ಹಿಂದೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಳಿ ಕೆಲಸ ನಿರ್ವಹಿಸಿದ್ದರಲ್ಲದೆ, ಸೈಕೊ ಎನ್ನುವ ಹಿಂದಿ ಸಿನಿಮಾ ನಿರ್ದೇಶಿಸಿದ್ದರು. 

ಸ್ಟಾಕರ್ ಸಿನಿಮಾದ ಕಥೆ ಎಟಿಎಸ್ ಅಧಿಕಾರಿ ಪಾತ್ರದ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುತ್ತದೆ, ಹೀಗಾಗಿ ಈ ಪ್ರಮುಖ ಪಾತ್ರಕ್ಕೆ ನಟಿ ಸುಮನ್ ನಗರ್ಕರ್ ಬಿಟ್ಟರೆ ಮತ್ತಾವ ನಟಿಯೂ ನೆನಪಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ ಕಿಶೋರ್. ಸ್ಕ್ರಿಪ್ಟ್ ಟೀಸ್ ಮತ್ತು ಎಸ್ಸೆಮ್ಮೆಲ್ ಪ್ರೊಡಕ್ಷನ್ಸ್ ಸಂಸ್ಥೆಗಳ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ. 

ಸ್ಟಾಕರ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸೋಮಶೇಖರ್ ಎನ್.ಕೆ ಮತ್ತು ಭರತ್ ಪ್ರಮೋದ್ ಅವರು ಬರೆದಿದ್ದಾರೆ. ವಿನೋದ್ ಜೆ. ರಜಿಸ್ ಸಿನಿಮೆಟೊಗ್ರಫಿ ಮತ್ತು ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಐಶ್ವರ್ಯ ನಂಬಿಯಾರ್, ಉದಯ್ ಆಚಾರ್, ನಮ್ರತಾ ಪಾಟೀಲ್, ಜಿತೆನ್ ಅರೋರಾ ಮತ್ತು ಭವಾನಿಶಂಕರ್ ದೇಸಾಯಿ ಮತ್ತಿತರ ಹೊಸಬರ ತಂಡವೇ ತಾರಾಗಣದಲ್ಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.