ಟಾಲಿವುಡ್ ಗೆ ಹೊರಟ 'ಶೋಕಿವಾಲಾ': ಕನ್ನಡ-ತೆಲುಗು ಭಾಷೆಯಲ್ಲಿ ರಿಲೀಸ್
ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.

ಅಜಯ್ ರಾವ್ ನಟಿಸಿರುವ ಜಾಕಿ ನಿರ್ದೇಶನದ ಶೋಕಿವಾಲಾ ಟಾಲಿವುಡ್ ನತ್ತ ಹೆಜ್ಜೆ ಹಾಕಿದೆ, ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.
ಅಜಯ್ ರಾವ್ ಅವರ ಕೃಷ್ಣನ ಮ್ಯಾರೇಜ್ ಸ್ಟೋರಿ, ಕೂಡ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿತ್ತು, ದ್ವಿಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಅಜಯ್ ರಾವ್ ನಟನೆಯ ಎರಡನೇ ಸಿನಿಮಾ ಇದಾಗಿದೆ.
ಕಳೆದ ವಾರ ಅಜೇಯ್ ರಾವ್ ನಟನೆಯ ಕೃಷ್ಣ ಟಾಕೀಸ್ ಕೂಡ ರಿಲೀಸ್ ಆಗಿತ್ತು. ಸದ್ಯ ರಿಲೀಸ್ ಆಗಲು ಶೋಕಿವಾಲಾ ರೆಡಿಯಾಗಿದೆ.
ಟಿ.ಆರ್ ಚಂದ್ರಶೇಖರ್ ನಿರ್ಮಾಣದ ಸಿನಿಮಾದ ತೆಲುಗು ಬಿಡುಗಡೆಯನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಟೀಸರ್ ಏಪ್ರಿಲ್ 21 ರಂದು ರಿಲೀಸ್ ಆಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


