'ತ್ರಿಬಲ್ ರೈಡಿಂಗ್' ಮೂಲಕ ಮೇಘಾಶೆಟ್ಟಿ ಕಿರುತೆರೆಯಿಂದ ಬೆಳ್ಳಿ ತೆರೆಗೆ ಪ್ರವೇಶ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ 'ಜೊತೆ ಜೊತೆಯಲ್ಲಿ' ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮನಗೆದ್ದು ಮನೆ ಮಗಳಾಗಿರುವ ಕರಾವಳಿ ಚೆಲುವೆ ಮೇಘಾಶೆಟ್ಟಿ, ಮಹೇಶ್ ಗೌಡ ನಿರ್ದೇಶನದ 'ತ್ರಿಬಲ್ ರೈಡಿಂಗ್' ನೊಂದಿಗೆ ಕಿರುತೆರೆಯಿಂದ ಬೆಳ್ಳಿ ತೆರೆಗೆ ಎಂಟ್ರಿ ನೀಡುತ್ತಿದ್ದಾರೆ.

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ 'ಜೊತೆ ಜೊತೆಯಲ್ಲಿ' ಧಾರಾವಾಹಿ ಮೂಲಕ ರಾಜ್ಯದ ಜನತೆಯ ಮನಗೆದ್ದು ಮನೆ ಮಗಳಾಗಿರುವ ಕರಾವಳಿ ಚೆಲುವೆ ಮೇಘಾಶೆಟ್ಟಿ, ಮಹೇಶ್ ಗೌಡ ನಿರ್ದೇಶನದ 'ತ್ರಿಬಲ್ ರೈಡಿಂಗ್' ನೊಂದಿಗೆ ಕಿರುತೆರೆಯಿಂದ ಬೆಳ್ಳಿ ತೆರೆಗೆ ಎಂಟ್ರಿ ನೀಡುತ್ತಿದ್ದಾರೆ.
ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಈಗಾಗಲೇ ಸಾಕಷ್ಟು ಖ್ಯಾತಿ ಪಡೆದಿರುವ ಮೇಘಾಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಿವಿ ಸೀರಿಯಲ್ ಕಲಾವಿದೆಯಾಗಿ ಪ್ರವೇಶ ಅನಿರೀಕ್ಷಿತವಾದದ್ದು, ಆದರೆ, ಈಗ ಸಿನಿಮಾದಲ್ಲಿ ಅಭಿನಯ ಸಾಕಷ್ಟು ಆಶ್ಚರ್ಯವನ್ನುಂಟುಮಾಡಿದೆ ಎಂದು ಮೇಘಾಶೆಟ್ಟಿ ಹೇಳಿದ್ದಾರೆ.
ಎಂಬಿಎ ಪದವೀಧರೆಯಾಗಿರುವ ಮೇಘಾಶೆಟ್ಟಿ ಅವರ ಕುಟುಂಬ ರಂಗಭೂಮಿ ಕಲಾವಿದರಾಗಿದ್ದಾರೆ. ತಮ್ಮ ತಂದೆ , ಅಜ್ಜಿ ರಂಗಭೂಮಿ ಕಲಾವಿದರಾಗಿದ್ದು, ಜೀ ಕನ್ನಡ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ತಮ್ಮ ಪ್ರತಿಭೆ ಗುರುತಿಸಿದರು.ತನ್ನ ನಟನಾ ವೃತ್ತಿ ನಿರ್ಧಾರ ಕೈಗೊಂಡ ಕ್ರೆಡಿಟ್ ಸಹೋದರಿ ಕುಸುಮಾವತಿಗೆ ಸಲ್ಲಬೇಕು ಎನ್ನುತ್ತಾರೆ.
ನನ್ನ ಸಿನಿಮಾಗಳ ಬಗ್ಗೆ ಸಹೋದರಿ ಕುಸುಮಾವತಿ ನಿಗಾ ವಹಿಸುತ್ತಾರೆ. ತ್ರಿಬಲ್ ರೈಡಿಂಗ್ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಉತ್ತಮ ಎಂಬ ಸಲಹೆ ನೀಡಿದ್ದರಿಂದ ತಾವು ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾಗಿ ಹೇಳುವ ಮೇಘಾಶೆಟ್ಟಿ, ತನ್ನ ಧಾರಾವಾಹಿ ಮತ್ತು ಚಿತ್ರದ ನಡುವೆ ತನ್ನ ಶೂಟಿಂಗ್ ವೇಳಾಪಟ್ಟಿಯನ್ನು ಹೊಂದಿಸಿಕೊಳ್ಳುಲು ಸಿದ್ಧವಿರುವಾದಿಗ ತಿಳಿಸಿದ್ದಾರೆ.
ತ್ರಿಬಲ್ ರೈಡಿಂಗ್ ಚಿತ್ರಕ್ಕೆ ಸಾಯಿ ಕಾರ್ತಿಕ್ ಸಂಗೀತ ಸಂಯೋಜಿಸಲಿದ್ದು, ಜೈ ಆನಂದ್ ಅವರ ಛಾಯಾಗ್ರಹಣವಿರಲಿದೆ. ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್ ಗೌಡ, ಕುರಿ ಪ್ರತಾಪ್ ಮತ್ತು ಹಿರಿಯ ಕಲಾವಿದರಾದ ಉಮೇಶ್, ಡಿಂಗ್ರಿ ನಾಗರಾಜ್ ಮತ್ತಿತರ ತಾರಾಗಣವಿದೆ.
ಧಾರಾವಾಹಿಯಲ್ಲಿ ತನ್ನ ಪಾತ್ರದ ಬಗ್ಗೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಇದೀಗ ಬೆಳ್ಳಿ ತೆರೆಗೆ ಶೀಘ್ರದಲ್ಲೇ ಪ್ರವೇಶಿಸಲಿದ್ದು, ಅವರ ಹಾರೈಕೆಯಿಂದ ಅಲ್ಲಿಯೂ ಯಶಸ್ಸು ಪಡೆಯುವುದಾಗಿ ವಿಶ್ವಾಸ ಇಟ್ಟುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


