'ಕೆಜಿಎಫ್ ಚಾಪ್ಟರ್ 2' ಗೆ 'ರಾಕಿ ಬಾಯ್' ಯಶ್ ಡಬಲ್ ವರ್ಕೌಟ್
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸರಣಿ ಚಿತ್ರಕ್ಕಾಗಿ ನಟ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ ಗೆ ಹೋಗುವ ಮುನ್ನ ಆದಷ್ಟು ದೇಹವನ್ನು ಚೆನ್ನಾಗಿ ಹುರಿಗೊಳಿಸಿ ತೆರೆಯ ಮೇಲೆ ಸುಂದರವಾಗಿ ಕಾಣಿಸಲು ಕಸರತ್ತು ನಡೆಸುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸರಣಿ ಚಿತ್ರಕ್ಕಾಗಿ ನಟ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ ಗೆ ಹೋಗುವ ಮುನ್ನ ಆದಷ್ಟು ದೇಹವನ್ನು ಚೆನ್ನಾಗಿ ಹುರಿಗೊಳಿಸಿ ತೆರೆಯ ಮೇಲೆ ಸುಂದರವಾಗಿ ಕಾಣಿಸಲು ಕಸರತ್ತು ನಡೆಸುತ್ತಿದ್ದಾರೆ.
ಯಶ್ ಅವರ ಆಪ್ತ ಮೂಲಗಳು ಹೇಳುವ ಪ್ರಕಾರ, ಅವರು ದಿನನಿತ್ಯದ ವರ್ಕೌಟ್ ಸಮಯವನ್ನು ಹೆಚ್ಚು ಮಾಡಿಕೊಂಡಿದ್ದು ವಿವಿಧ ವ್ಯಾಯಾಮ, ಕುಸ್ತಿಗಳನ್ನು ಬೇರೆ ಬೇರೆ ಸಮಯಗಳಲ್ಲಿ ಮಾಡುತ್ತಿದ್ದಾರಂತೆ. ಬೆಳಗ್ಗೆ 6 ಗಂಟೆಯಿಂದ ಅರ್ಧ ಗಂಟೆ ಕಾಲ ಕಾರ್ಡಿಯೊ ಮಾಡುತ್ತಾರೆ. ನಂತರ ತೂಕಕ್ಕೆ ಸಂಬಂಧಿಸಿದ ತರಬೇತಿ, ಆ್ಯಬ್ ವರ್ಕೌಟ್ ಒಂದು ಗಂಟೆ ಮತ್ತೆ ಕಾರ್ಡಿಯೊ ಸೆಷನ್ ನಲ್ಲಿ ಪಾಲ್ಗೊಳ್ಳುತ್ತಾರೆ. ಸಾಯಂಕಾಲ ವಿವಿಧ ವ್ಯಾಯಾಮ, ಭಾರೀ ದೈಹಿಕ ಕಸರತ್ತು ಮತ್ತು ಕಟ್ಟುನಿಟ್ಟಿನ ಡಯಟ್ ಕೂಡ ಪಾಲಿಸುತ್ತಾರಂತೆ.
ಕೆಜಿಎಫ್ 2ನಲ್ಲಿ ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್, ಮಾಳವಿಕಾ ಅವಿನಾಶ್ ಕೂಡ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


