ಶ್ರಿಯಾ ಶರಣ್ ಅಭಿನಯದ 'ಗಮನಂ' ಫಸ್ಟ್ ಲುಕ್ ರಿವೀಲ್
ನಟ ಶ್ರಿಯಾ ಶರಣ್ ಅವರ 38 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಮುಂದಿನ ಚಿತ್ರ "ಗಮನಂ"ನ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿರ್ದೇಶಕ ಕ್ರಿಶ್ ಬಿಡುಗಡೆ ಮಾಡಿದ್ದಾರೆ. ಅರ್ಬನ್ ಸೋಷಿಯಲ್ ಡ್ರಾಮಾ ಎಂಬ ಉಪಶೀರ್ಷಿಕೆ ಇರುವ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ನಟ ಶ್ರಿಯಾ ಶರಣ್ ಅವರ 38 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಮುಂದಿನ ಚಿತ್ರ "ಗಮನಂ"ನ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿರ್ದೇಶಕ ಕ್ರಿಶ್ ಬಿಡುಗಡೆ ಮಾಡಿದ್ದಾರೆ. ಅರ್ಬನ್ ಸೋಷಿಯಲ್ ಡ್ರಾಮಾ ಎಂಬ ಉಪಶೀರ್ಷಿಕೆ ಇರುವ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪೋಸ್ಟರ್ ನಲ್ಲಿ ಶ್ರಿಯಾ ಗಾಢವರ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.
"ಚಿತ್ರವು ನಿಜ ಜೀವನದ ಘಟನೆ ಆಧರಿಸಿದೆ. . ಎಲ್ಲಾ ಪಾತ್ರಗಳು ಮತ್ತು ಕಥೆಸಾಪೇಕ್ಷವಾಗಿವೆ. ಒಂದು ರೀತಿಯಲ್ಲಿ, ಶ್ರಿಯಾ ಪಾತ್ರವು ವಿಭಿನ್ನ ಛಾಯೆಯನ್ನು ಒಳಗೊಂಡಿದೆ. ಆಕೆ ಅದನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನಾನು ದೃಶ್ಯಗಳನ್ನು ನೋಡಿದಾಗಲೆಲ್ಲಾ ಅವರ ಅಭಿನಯ ನನ್ನ ಮನಸ್ಸನ್ನು ಸೆಳೆಯುತ್ತದೆ" ನಿರ್ದೇಶಕಿ ಸುಜನಾ ರಾವ್ ಹೇಳಿದ್ದಾರೆ.
ಈ ಚಿತ್ರಕ್ಕೆ ಇಳಯರಾಜಾ ಸಂಗೀತವಿದೆ. . "ನಾವು ಕಳೆದ ವರ್ಷ ಶೂಟಿಂಗ್ ಅನ್ನುಪೂರ್ಣಗೊಳಿಸಿದ್ದೆವು. ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಸ್ಥಗಿತಗೊಳಿಸಬೇಕಾಯಿತು. ರಿ-ರೆಕಾರ್ಡಿಂಗ್ ಇನ್ನೂ ಬಾಕಿ ಉಳಿದಿದೆ. ಇದು ಖಾಲಿ ವರ್ಷವಾಗಿರಲಿದೆ ಎಂದು ನಾನು ಭಾವಿಸಿದ್ದೆ. ಆದರೆ ಇಳಯರಾಜಾ ಅವರ ಸಿನೆಮಾ ಮೇಲಿನ ಪ್ರೀತಿಯು ವು ಎಲ್ಲವನ್ನೂ ಸಮಯಕ್ಕೆ ಪೂರ್ಣಗೊಳಿಸಲು ನಮಗೆ ಸಹಾಯ ಮಾಡಿದೆ. ಅವರು ವೀಡಿಯೊ ಕರೆಗಳ ಮೂಲಕ ಸಂಪರ್ಕಿಸಿ ನಮ್ಮ ಚಿತ್ರದ ರಿ-ರೆಕಾರ್ಡಿಂಗ್ ಅನ್ನು ಸಾಧ್ಯವಾದಷ್ಟು ವೇಗವಾಗಿ ಪೂರ್ಣಗೊಳಿಸಲು ಸುಮಾರು 45 ದಿನಗಳ ಕಾಲ ಹಗಲು ರಾತ್ರಿ ಕೆಲಸ ಮಾಡಿದರು ”

ನಿತ್ಯಾ ಮೆನೆನ್, ಶಿವ ಕಂಡುಕುರಿ ಮತ್ತು ಪ್ರಿಯಾಂಕಾ ಜವಾಲ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ "ಗಮನಂ:"ಗೆ ಸಾಯಿ ಮಾಧವ್ ಸಂಭಾಷಣೆ ಇದೆ, ಚಿತ್ರವನ್ನು ಮುಖ್ಯವಾಗಿ ವಿಶಾಖಪಟ್ಟಣಂ ಮತ್ತು ಹೈದರಾಬಾದ್‌ನಲ್ಲಿ ಚಿತ್ರೀಕರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


