ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ 'ಉಪಾಧ್ಯಕ್ಷ'!
ಇಷ್ಟು ದಿನ ತೆರೆ ಮೇಲೆ ಹಾಸ್ಯ ನಟನಾಗಿ ಪ್ರೇಕ್ಷಕರ ಎದೆಯಲ್ಲಿ ಕಚಗುಳಿಯಿಡುತ್ತಿದ್ದ ನಟ ಚಿಕ್ಕಣ್ಣ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕರಾಗುತ್ತಿದ್ದಾರೆ.

ಬೆಂಗಳೂರು: ಇಷ್ಟು ದಿನ ತೆರೆ ಮೇಲೆ ಹಾಸ್ಯ ನಟನಾಗಿ ಪ್ರೇಕ್ಷಕರ ಎದೆಯಲ್ಲಿ ಕಚಗುಳಿಯಿಡುತ್ತಿದ್ದ ನಟ ಚಿಕ್ಕಣ್ಣ ಈಗ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕರಾಗುತ್ತಿದ್ದಾರೆ.
ಚಿಕ್ಕಣ್ಣ ಮೊದಲ ಬಾರಿಗೆ ಹೀರೋ ಆಗುತ್ತಿರುವ ಸಿನಿಮಾವನ್ನು ರಾಬರ್ಟ್ ನಿರ್ಮಾಪಕ ಉಮಾಪತಿ ಗೌಡ ನಿರ್ಮಿಸಲಿದ್ದು, ಚಂದ್ರ ಮೋಹನ್ ನಿರ್ದೇಶಿಸುತ್ತಿದ್ದಾರೆ. ಹಾಸ್ಯನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಉಪಾಧ್ಯಕ್ಷ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಿ ನಡೆದಿದೆ.
ಕೆಲ ವರ್ಷಗಳ ಹಿಂದೆ ಶರಣ್-ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ 'ಅಧ್ಯಕ್ಷ' ಸಿನಿಮಾ ತೆರೆಕಂಡು, ಸೂಪರ್ ಹಿಟ್ ಎನಿಸಿಕೊಂಡಿತ್ತು. ಅದರಲ್ಲಿ ಶರಣ್ ಅಧ್ಯಕ್ಷನಾಗಿದ್ದರೆ, ಚಿಕ್ಕಣ್ಣ ಉಪಾಧ್ಯಕ್ಷನಾಗಿ ಮಿಂಚಿದ್ದರು. ಇದೀಗ ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾದಲ್ಲಿ ಅದನ್ನೇ ಟೈಟಲ್ ಮಾಡಲಾಗಿದೆ.
ಸದ್ಯ ಉಮಾಪತಿ ಶ್ರೀನಿವಾಸ್ 'ರಾಬರ್ಟ್' ಸಿನಿಮಾದ ಕೆಲಸಗಳನ್ನು ಮುಗಿಸಿದ್ದಾರೆ. ದರ್ಶನ್ ಅಭಿನಯದ ಈ ಸಿನಿಮಾದ ಮೇಲೆ ಸ್ಯಾಂಡಲ್‌ವುಡ್ ನಿರೀಕ್ಷೆ ಇಟ್ಟುಕೊಂಡಿದೆ. ಅದರ ಜೊತೆಗೆ ಶ್ರೀಮುರಳಿ ನಟನೆಯ 'ಮದಗಜ' ಚಿತ್ರಕ್ಕೆ ಮತ್ತೊಂದು ಹಂತದ ಚಿತ್ರೀಕರಣವನ್ನು ಸಹ ಮುಗಿಸಿಕೊಂಡು ಬಂದಿದ್ದಾರೆ.
ಇದೀಗ ಅವರು ಚಿಕ್ಕಣ್ಣ ಹೀರೋ ಆಗಿರುವ 'ಉಪಾಧ್ಯಕ್ಷ' ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಅತ್ತ ಚಿಕ್ಕಣ್ಣ 'ರಾಬರ್ಟ್', 'ಪೊಗರು', 'ಮದಗಜ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು ಡಿಸೆಂಬರ್ ತಿಂಗಳಿನಲ್ಲಿ ಶೂಟಿಂಗ್ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


