8 ವರ್ಷದ ನಂತರ ತೆರೆ ಮೇಲೆ ಮತ್ತೆ ಒಂದಾದ ಐಂದ್ರಿತಾ-ದಿಗಂತ್ ಜೋಡಿ!
ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಬರೋಬ್ಬರಿ ಎಂಟು ವರ್ಷಗಳ ನಂತರ ತೆರೆ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಐಂದ್ರಿತಾ ರೇ ಅವರೇ ತಮ್ಮ ಟ್ವಿಟ್ತರ್ ಮೂಲಕ ಈ ವಿಷಯ ಬಹಿರಂಗಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಬರೋಬ್ಬರಿ ಎಂಟು ವರ್ಷಗಳ ನಂತರ ತೆರೆ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಐಂದ್ರಿತಾ ರೇ ಅವರೇ ತಮ್ಮ ಟ್ವಿಟ್ತರ್ ಮೂಲಕ ಈ ವಿಷಯ ಬಹಿರಂಗಪಡಿಸಿದ್ದಾರೆ.
ವಿನಾಯಕ ಕೋಡ್ಸರ ನಿರ್ದೇಶನದ ‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಎಂಬ ಚಿತ್ರದಲ್ಲಿ ಈ ಸ್ಯಾಂಡಲ್ ವುಡ್ ಜೋಡಿ ಒಂದಾಗಿದೆ.
ಇದಕ್ಕೆ ಹಿಂದೆ 2012ರಲ್ಲಿ ತೆರೆ ಕಂಡ ‘ಪಾರಿಜಾತ’ ಚಿತ್ರದಲ್ಲಿ ಕಡೆಯ ಬಾರಿಗೆ ದಿಗಂತ್ ಹಾಗೂ ಐಂದ್ರಿತಾ ಒಟ್ಟಾಗಿ ಕಾಣಿಸಿಕೊಂಡಿದ್ದರು.
ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಐಂದ್ರಿತಾ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ ಮಲೆನಾಡಿನ ಮೋಹಕ ತಾಣದಲ್ಲಿ ಚಿತ್ರೀಕರಣ. ನನ್ನ ಆಫ್ ಸ್ಕ್ರೀನ್ ಲವ್ ನೊಂದಿಗೆ 8 ವರ್ಷಗಳ ನಂತರ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುವ ಖುಷಿ" ಐಂದ್ರಿತಾ ಹೇಳಿದ್ದಾರೆ.
‘ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿಲ್ಕ್ ಮಂಜು ನಿರ್ಮಾಣದಲ್ಲಿ ತಯಾರಾಗುತ್ತಿದೆ. "ಕನ್ನಡತಿ" ಖ್ಯಾತಿಯ ರಂಜನಿ ರಾಘವನ್ ಈ ಚಿತ್ರದಲ್ಲಿ ಮತ್ತೊಬ್ಬ ಪ್ರಮುಖ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ರಜ್ವಲ್ ಪೈ ಸಂಗೀತ ಸಂಯೋಜನೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


