ಸಿನಿಮಾ ಸುದ್ದಿ

ಕಿರಿಕ್ ಬೆಡಗಿ ರಶ್ಮಿಕಾ ಈಗ 'ನ್ಯಾಷನಲ್ ಕ್ರಶ್ ಅಫ್ ಇಂಡಿಯಾ'!

ಗೂಗಲ್ ನಲ್ಲಿ "ನ್ಯಾಷನಲ್ ಕ್ರಶ್ ಆಫ್ ಇಂಡಿಯಾ" ಎಂದು ಹುಡುಕಿದರೆ ನಿಮಗೆ ರಶ್ಮಿಕಾ ಮಂದಣ್ನ ಹೆಸರು ಹಾಗೂ ಚಿತ್ರ ಕಾಣಿಸುತ್ತದೆ!

ಕಿರಿಕ್ ಬೆಡಗಿ ರಶ್ಮಿಕಾ ಈಗ 'ನ್ಯಾಷನಲ್ ಕ್ರಶ್ ಅಫ್ ಇಂಡಿಯಾ'!
Published On :

ಗೂಗಲ್ ನಲ್ಲಿ "ನ್ಯಾಷನಲ್ ಕ್ರಶ್ ಆಫ್ ಇಂಡಿಯಾ" ಎಂದು ಹುಡುಕಿದರೆ ನಿಮಗೆ ರಶ್ಮಿಕಾ ಮಂದಣ್ನ ಹೆಸರು ಹಾಗೂ ಚಿತ್ರ ಕಾಣಿಸುತ್ತದೆ! 

Story image

ಹೌದು ಈ ಹಿಂದೆ ನ್ಯಾಷನಲ್ ಕ್ರಶ್ ಎನ್ನಿಸಿಕೊಂಡಿದ್ದ ಪ್ರಿಯಾ ವಾರಿಯರ್ ಹಾಗೂ ದಿಶಾ ಪಟಾನಿ ಅವರುಗಳನ್ನು ಹಿಂದಿಕ್ಕಿ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಇದೀಗ "ನ್ಯಾಷನಲ್ ಕ್ರಶ್ ಆಫ್ ದಿ ಇಂಡಿಯಾ" ಎನಿಸಿದ್ದಾರೆ.

ರಶ್ಮಿಕಾ ಮಂದಣ್ನ ಅವರೀಗ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ "ಪುಷ್ಪ" ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ ಅವರ  'ಪೊಗರು' ಚಿತ್ರದಲ್ಲಿ ಅಭಿನಯಿಸಿರುವ ನಟಿ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.

Story image

ದಕ್ಷಿಣ ಭಾರತದ ಖ್ಯಾತ ನಟಿಯಾದರೂ ರಶ್ಮಿಕಾ ಇದುವರೆಗೆ ಒಂದೇ ಒಂದು ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹಾ ನಟಿಯನ್ನು ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಎಂದು ಗುರುತಿಸುವುದು ನಿಜಕ್ಕೂ ವಿಶೇಷ ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.