ಲಾಕ್ ಡೌನ್ ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ 'ಪವರ್': 'ಯುವರತ್ನ' ಡಬ್ಬಿಂಗ್ ಶುರು
ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಇತ್ತೀಚಿನ ಟ್ವೀಟ್ ಪವರ್ ಸ್ಟಾರ್ ಅವರ ಚಿತ್ರದ ಕುರಿತು ಹೊಸವಿಚಾರವನ್ನು ಬಹಿರಂಗಪಡಿಸಿ

ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ ಡಬ್ಬಿಂಗ್ ಕಾರ್ಯ ಭರದಿಂದ ಸಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಇತ್ತೀಚಿನ ಟ್ವೀಟ್ ಪವರ್ ಸ್ಟಾರ್ ಅವರ ಚಿತ್ರದ ಕುರಿತು ಹೊಸವಿಚಾರವನ್ನು ಬಹಿರಂಗಪಡಿಸಿದೆ.
ಆಕ್ಷನ್ ಕಮರ್ಷಿಯಲ್ ಎಂಟರ್ಟೈನರ್ ರಾಜಕುಮಾರ ನಂತರ ಎರಡನೇ ಬಾರಿಗೆ ನಿರ್ದೇಶಕ-ನಟ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಒಂದಾಗಿದ್ದಾರೆ.
ಇದು ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು ಚಿತ್ರದ ಪೋಸ್ಟರ್‌ಗಳು ಮತ್ತು ಇತ್ತೀಚಿನ ಡೈಲಾಗ್ ಟೀಸರ್ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಕೇವಲ 20 ದಿನಗಳ ಶೂಟಿಂಗ್ ಬಾಕಿ ಉಳಿದಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಏತನ್ಮಧ್ಯೆ, ನಿರ್ದೇಶಕರು ಹಾಡಿನ ದೃಶ್ಯ ಚಿತ್ರೀಕರಣಕ್ಕೆ ಇನ್ನೂ ಸ್ಥಳವನ್ನು ಅಂತಿಮ ಮಾಡಿಲ್ಲ. ಶೂಟಿಂಗ್ ಪುನರಾರಂಭಿಸಲು ಸರ್ಕಾರ ಅನುಮತಿ ನೀಡುವವರೆಗೆ ಅವರು ಕಾಯಲು ಸಿದ್ದವಾಗಿದ್ದಾರೆ.
ಇನ್ನು ಯುವರತ್ನದಲ್ಲಿ ದಕ್ಷಿಣ ಭಾರತೀಯ ನಟಿ ಸಯ್ಯೇಶಾ ಮೊದಲ ಬಾರಿಗೆ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟರಾದ ರಾಧಿಕಾ ಶರತ್‌ಕುಮಾರ್, ಪ್ರಕಾಶ್ ರಾಜ್, ಧನಂಜಯ್ ಅ ಸಹ ಅಭಿನಯಿಸಿರುವ ಈ ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಎಸ್ ತಮನ್ ಸಂಗೀತ ಸಂಯೋಜನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


