ಸಿನಿಮಾ ಸುದ್ದಿ

ಕಾರ್ಮಿಕರ ದಿನ: ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್

ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ಯಾಂಡಲ್ ವುಡ್ ರಾಬರ್ಟ್ ಚಿತ್ರ ತಂಡ, ಸಿನಿ ಕಾರ್ಮಿಕರಿಗೆ ಮೇಕಿಂಗ್ ವಿಡಿಯೋ ಮೂಲಕ‌ ಶುಭಾಶಯ ಕೋರಿದರೆ .ನಟ ರಮೇಶ್ ಅರವಿಂದ್ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ

ಕಾರ್ಮಿಕರ ದಿನ: ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್
ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್
Published On :

ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ಯಾಂಡಲ್ ವುಡ್ ರಾಬರ್ಟ್ ಚಿತ್ರ ತಂಡ, ಸಿನಿ ಕಾರ್ಮಿಕರಿಗೆ ಮೇಕಿಂಗ್ ವಿಡಿಯೋ ಮೂಲಕ‌ ಶುಭಾಶಯ ಕೋರಿದರೆ .ನಟ ರಮೇಶ್ ಅರವಿಂದ್ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ

ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದ ಎದುರು ಕಸ ಗುಡಿಸಲು ಬರುವ ಪೌರ ಕಾರ್ಮಿಕರ ಮೇಲೆ ಹೂವಿನ ಸುರಿಮಳೆಗೈಯುವ ಮೂಲಕ ರಮೇಶ್ ಅವರು ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ.

ಪ್ರತಿನಿತ್ಯ ತಮ್ಮ ಮನೆ ಮುಂದಿನ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯ ಮೇಲೆ ಹೂವಿನ ಮಳೆಗೆರೆದ ನಟ "ನಮ್ಮ ನಿತ್ಯದ ಬದುಕು ನೀವಿಲ್ಲದೆ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. .ಎಲ್ಲಾ ಕಾರ್ಮಿಕರಿಗು ನನ್ನ ಪ್ರೀತಿಯ ನಮನಗಳು" ಎಂದು ಹೇಳಿದ್ದಾರೆ

ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರಿದಿರುವ ಈ ಸಮಯದಲ್ಲಿ ವೈದ್ಯರು, ದಾದಿಯರು, ಪೋಲೀಸರು ಜತೆಗೆ ಪೌರ ಕಾರ್ಮಿಕರು ಸಹ ಅವರತ ಶ್ರಮಿಸುತ್ತಿದ್ದಾರೆ.  ಅಂತಹಾ ಪೌರ ಕಾರ್ಮಿಕರಿಗೆ ರಮೇಶ್ ಗೌರವ ಸೂಚಿಸಿರುವುದು ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ನಟ ರಮೇಶ್ ಅರವಿಂದ್ ಅವರ 'ಶಿವಾಜಿ ಸುರತ್ಕಲ್' ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು ಲಾಕ್ ಡೌನ್ ಮುಗಿದ ನಂತರ ಅವರ ಮುಂದಿನ ಚಿತ್ರವಾದ '100' ತೆರೆಗೆ ಬರಲಿಕ್ಕೆ ಸಿದ್ದವಿದೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.