ಕಾರ್ಮಿಕ ದಿನ

ಕಾರ್ಮಿಕರ ದಿನ: ಪೌರ ಕಾರ್ಮಿಕರ ಮೇಲೆ ಹೂಮಳೆ ಸುರಿದ ನಟ ರಮೇಶ್
ಕಾರ್ಮಿಕ ದಿನಾಚರಣೆ ಪ್ರಯುಕ್ತ ಸ್ಯಾಂಡಲ್ ವುಡ್ ರಾಬರ್ಟ್ ಚಿತ್ರ ತಂಡ, ಸಿನಿ ಕಾರ್ಮಿಕರಿಗೆ ಮೇಕಿಂಗ್ ವಿಡಿಯೋ ಮೂಲಕ ಶುಭಾಶಯ ಕೋರಿದರೆ .ನಟ ರಮೇಶ್ ಅರವಿಂದ್ ಒಂದು ಹೆಜ್ಜೆ ಮುಂದೆ ಹೋಗಿ ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದ್ದಾರೆ

ಕೊರೊನಾದಿಂದ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿದೆ: ಎಚ್.ಡಿ.ಕುಮಾರಸ್ವಾಮಿ
ಕೊರೋನಾದಂತಹ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾರ್ಮಿಕ ದಿನ: ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ
ದೇಶದಾದ್ಯಂತ ಶುಕ್ರವಾರ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ರಾಜ್ಯದ ಜನತೆಗೆ ಶುಭಕೋರಿದ್ದಾರೆ.

