ಸಿನಿಮಾ ಸುದ್ದಿ

ಪುನೀತ್ ಬರ್ತ್ ಡೇ ಗೆ ಜೇಮ್ಸ್ ಚಿತ್ರತಂಡದಿಂದ ಭರ್ಜರಿ ಗಿಫ್ಟ್, ಮೋಷನ್ ಪೋಸ್ಟರ್ ಬಿಡುಗಡೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಪ್ಪು ಅಭಿಮಾನಿಗಳಿಗೆ ಚಿತ್ರ ತಂಡ ಭರ್ಜರಿ ಉಡುಗೊರೆ ನೀಡಿದೆ.

ಪುನೀತ್ ಬರ್ತ್ ಡೇ ಗೆ ಜೇಮ್ಸ್ ಚಿತ್ರತಂಡದಿಂದ ಭರ್ಜರಿ ಗಿಫ್ಟ್, ಮೋಷನ್ ಪೋಸ್ಟರ್ ಬಿಡುಗಡೆ
ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್
Published On :

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಪ್ಪು ಅಭಿಮಾನಿಗಳಿಗೆ ಚಿತ್ರ ತಂಡ ಭರ್ಜರಿ ಉಡುಗೊರೆ ನೀಡಿದೆ.

ಈ ಹಿಂದೆ ಪವರ್​ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ ನಿಮಿತ್ತ ಯುವರತ್ನ ಚಿತ್ರತಂಡ ಯುವರತ್ನ ಡೈಲಾಗ್​ ಟೀಸರ್ ಬಿಡುಗಡೆ ಮಾಡಿತ್ತು. ಈ ಟೀಸರ್ ಗೆ ​​​​ಭರ್ಜರಿ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದ್ದು, ಟೀಸರ್ ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದೆ. ಇದರ ಬೆನ್ನಲ್ಲೇ ಇದೀಗ ಜೇಮ್ಸ್ ಮೋಷನ್ ಪೋಸ್ಟರ್ ಕೂಡ ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಜೇಮ್ಸ್ ಬಹದ್ದೂರ್ ಖ್ಯಾತಿಯ​ ಚೇತನ್​ ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನ ಬಹು ನಿರೀಕ್ಷಿತ ಚಿತ್ರವಾಗಿದೆ. ಈಗಾಗಲೇ ಚಿತ್ರದ ಫಸ್ಟ್​ ಶೆಡ್ಯೂಲ್​ ಶೂಟಿಂಗ್​ ಪೂರ್ಣಗೊಂಡಿದ್ದು, ಪುನೀತ್ ರಾಜ್ ಕುಮಾರ್ ಜನ್ಮದಿನ ನಿಮಿತ್ತ ಮೋಷನ್​ ಪೋಸ್ಟರ್​​ ರಿಲೀಸ್​ ಮಾಡಲಾಗಿದೆ.

ಚಿತ್ರಕ್ಕೆ ಕಿಶೋರ್​ ಪತ್ತಿಕೊಂಡ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಕೆಲದಿನಗಳ ಹಿಂದೆ ಸರಳವಾಗಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ, ಇತ್ತೀಚೆಗೆ ನಾಲ್ಕೈದು ದಿನಗಳ ಕಾಲ ಚಿತ್ರೀಕರಣ ಪೂರ್ಣ ಮಾಡಿದೆ. ಈ ಮೊದಲು ಮೋಷನ್ ಪೋಸ್ಟರ್ ಝಲಕ್ ತೋರಿಸಿದ್ದ ಚಿತ್ರತಂಡ, ಪೋಸ್ಟರ್ ನಲ್ಲಿ ಬೋಲೋ ಬೋಲೋ ಜೇಮ್ಸ್ ಎನ್ನುವ ಟೈಟಲ್ ಇಟ್ಟಿತ್ತು. ಈಗ ರೇಸರ್ ಖದರ್, ಸ್ಟೈಲ್ ರಿವೀಲ್ ಆಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.