ಸಿನಿಮಾ ಸುದ್ದಿ

ಬ್ಲ್ಯಾಕ್‍ಮೇಲ್ ಮಾಡಿ  ಪದೇ ಪದೇ ಅತ್ಯಾಚಾರ: ನಿರ್ಮಾಪಕನ ವಿರುದ್ಧ ನಟಿ ದೂರು

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನಿರ್ಮಾಪಕನೊಬ್ಬ ನಟಿ ಮೇಲೆ ಅತ್ಯಾಚಾರ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

ಬ್ಲ್ಯಾಕ್‍ಮೇಲ್ ಮಾಡಿ  ಪದೇ ಪದೇ ಅತ್ಯಾಚಾರ: ನಿರ್ಮಾಪಕನ ವಿರುದ್ಧ ನಟಿ ದೂರು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನಿರ್ಮಾಪಕನೊಬ್ಬ ನಟಿ ಮೇಲೆ ಅತ್ಯಾಚಾರ ಮಾಡಿರುವ ಆರೋಪವೊಂದು ಕೇಳಿ ಬಂದಿದೆ.

ಸಂಗಮೇಶ್ ಪಾಟೀಲ್ ವಿರುದ್ಧ ನಟಿ ದೂರು ನೀಡಿದ್ದಾಳೆ ಆರೋಪಿ ಸಂಗಮೇಶ್ 2013ರಲ್ಲಿ ಸಿನಿಮಾದಲ್ಲಿ ಚಾನ್ಸ್ ಕೊಡಿಸುವುದಾಗಿ ಕಿರುತೆರೆ ನಟಿಯನ್ನು ಹೈದರಾಬಾದ್‍ಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿ ನಟಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ.

ಕಳೆದ 6 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ನಿರ್ಮಾಪಕನ ವಿರುದ್ಧ ನಟಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ದೂರಿನ ಮೆರೆಗೆ ಪೊಲೀಸರು ನಿರ್ಮಾಪಕನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಇದೀಗ ನ್ಯಾಯಾಲಯದ ಸೂಚನೆಯಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಂಗಮೇಶ್ವರ ಪಾಟೀಲ್ ಕಿರುತೆರೆ ನಟಿಗೆ ಕರೆ ಮಾಡಿ ತಾನು ನಿರ್ಮಾಪಕನೆಂದು ಹೇಳಿಕೊಂಡಿದ್ದನು. ಅಲ್ಲದೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಚಿತ್ರರಂಗದಲ್ಲಿರುವ ಒಬ್ಬ ವ್ಯಕ್ತಿಯ ಬಳಿ ಪಡೆದೆ. ಚಿತ್ರರಂಗದಲ್ಲಿ ನಿಮಗೆ ನಟಿ ಆಗುವ ಚಾನ್ಸ್ ಕೊಡಿಸುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿದ್ದನು. ಇದಾದ ಕೆಲವು ದಿನಗಳ ನಂತರ ಸಂಗಮೇಶ್, ಯುವತಿಗೆ ಕರೆ ಮಾಡಿ ಚಿತ್ರವೊಂದರಲ್ಲಿ ನಟಿ ಪಾತ್ರ ಕೊಡಿಸುತ್ತೇನೆ ಎಂದು ಹೇಳಿ ಆಕೆಯನ್ನು ಹೈದರಾಬಾದ್‍ಗೆ ಕರೆಸಿಕೊಂಡಿದ್ದನು. ಆರೋಪಿ ಮಾತು ನಂಬಿದ ಯುವತಿ ಹೈದರಾಬಾದ್‍ಗೆ ತೆರಳಿದ್ದಳು.

ಯುವತಿ ಹೈದರಾಬಾದ್‍ಗೆ ಹೋಗಿದ್ದಾಗ ಆರೋಪಿ ಆಕೆಯನ್ನು ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಹಾಕಿ ಆಕೆಗೆ ನೀಡಿದ್ದನು. ತಂಪು ಪಾನೀಯ ಕುಡಿದ ಯುವತಿ ಪ್ರಜ್ಞೆ ತಪ್ಪಿದ್ದಾಗ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. 

ಬಳಿಕ ಯುವತಿಗೆ ಪ್ರಜ್ಞೆ ಬಂದಾಗ ಆಕೆಯ ಮೇಲೆ ಅತ್ಯಾಚಾರವಾದ ವಿಷಯ ಬೆಳಕಿಗೆ ಬಂದಿದೆ. ಆದಾದ ಬಳಿಕ ಆರೋಪಿ ಯುವತಿಯನ್ನು ಸಮಾಧಾನ ಮಾಡಿ ಆಕೆಯನ್ನು ಬೆಂಗಳೂರಿಗೆ ವಾಪಸ್ ಕಳುಹಿಸಿದ್ದನು. ಈ ಘಟನೆಯನ್ನು ನಟಿ ಯಾರ ಬಳಿಯೂ ಹೇಳದೇ ಸುಮ್ಮನಾಗಿದ್ದಳು ಎನ್ನಲಾಗಿದೆ.

ಈ ಘಟನೆ ನಡೆದ ನಂತರ 2014ರಲ್ಲಿ ಆರೋಪಿ ಮತ್ತೆ ಯುವತಿಗೆ ಕರೆ ಮಾಡಿ ಗೋವಾಗೆ ಬರುವಂತೆ ಹೇಳಿದ್ದಾನೆ. ಆದರೆ ಯುವತಿ ಇದಕ್ಕೆ ನಿರಾಕರಿಸಿದ್ದಳು. ಯುವತಿ ನಿರಾಕರಿಸಿದಾಗ ಆರೋಪಿ ನನ್ನ ಬಳಿ ನಿನ್ನ ನಗ್ನ ವಿಡಿಯೋಗಳಿವೆ. ಅದನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ವಿಡಿಯೋ ವೈರಲ್ ಆಗುತ್ತೆ ಎಂಬ ಭಯದಿಂದ ಯುವತಿ ಗೋವಾಗೆ ತೆರಳಿದ್ದಳು. ಈ ವೇಳೆ ಆರೋಪಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದನು. ಬಳಿಕ ಮುಂಬೈನಲ್ಲೂ ಆರು ಬಾರಿ ಆರೋಪಿ ನಟಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ನಿರ್ಮಾಪಕ ಆಗಾಗ ನಟಿಯ ಮನೆಗೆ ಬಂದು ಹೋಗುತ್ತಿದ್ದನು. ಈ ವೇಳೆ ಆತ ನಟಿಗೆ ಪ್ರತ್ಯೇಕ ಮನೆ ಮಾಡುವಂತೆ ತಿಳಿಸಿದ್ದನು. ನಟಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಬಳಿಕ ತನ್ನನ್ನು ಮದುವೆ ಆಗುವಂತೆ ನಟಿ ನಿರ್ಮಾಪಕನ ಬಳಿ ಕೇಳಿಕೊಂಡಿದ್ದು, ಆರೋಪಿ ಕೂಡ ಇದಕ್ಕೆ ಒಪ್ಪಿಕೊಂಡಿದ್ದನು.

ಮದುವೆಗೂ ಮೊದಲು ಆತನ ಹಿನ್ನೆಲೆ ಪರಿಶೀಲಿಸಿದಾಗ ಆರೋಪಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿರುವ ವಿಷಯ ಬೆಳಕಿಗೆ ಬಂದಿದೆ. ನಟಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ಸುಪಾರಿ ಕೊಟ್ಟು ಆಕೆಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದನು.

ಈ ಘಟನೆ ಬಗ್ಗೆ ತಿಳಿದ ಆರೋಪಿ ಪತ್ನಿ ನಟಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಹೈದರಾಬಾದ್‍ಗೆ ಕರೆಸಿಕೊಂಡಿದ್ದಳು. ಈ ವೇಳೆ ನಟಿಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಳು. ಈ ಸಬಂಧ ಪಾಟೀಲ್ ವಿರುದ್ಧ ಅಮೃತಹಳ್ಳಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.