ನಿರ್ಮಾಪಕ

ನಾನು ನಿರ್ಮಿಸಿದ ಎಲ್ಲಾ ಸಿನಿಮಾಗಳಿಂದ ನಷ್ಟ ಅನುಭವಿಸಿದ್ದೇನೆ: ವಿಜಯ್ ಸೇತುಪತಿ ಬೇಸರ
ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಕೂಡ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಹೊಸ ಸಿನಿಮಾಗಳನ್ನು ಅವರು ನಿರ್ಮಿಸುತ್ತಿದ್ದಾರೆ. ಅವರು ಬಂಡವಾಳ ಹಾಕಿದ ಸಿನಿಮಾಗಳೆಲ್ಲ ಬಾಕ್ಸ್ ಆಫೀಸ್ನಲ್ಲಿ ಸೋತಿವೆ.

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಬಿಗ್ ಬಾಸ್ ಸ್ಪರ್ಧಿ-ನಟಿಗೆ ಲೈಂಗಿಕ ಕಿರುಕುಳ: ನಿರ್ಮಾಪಕ ಹೇಮಂತ್ ಕುಮಾರ್ ಅರೆಸ್ಟ್
ರಿಚ್ಚಿ ಸಿನಿಮಾದ ಶೂಟಿಂಗ್ ವೇಳೆ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿ ಬಿಗ್ ಬಾಸ್ 11 ಸ್ಪರ್ಧಿಯೊಬ್ಬರು ದೂರು ನೀಡಿದ್ದರು. ಅದರ ಅನ್ವಯ ಅನ್ನಪೂರ್ಣೇಶ್ವರಿನಗರ ನಿವಾಸಿ ಹೇಮಂತ್ ಕುಮಾರ್ (34) ನನ್ನು ಬಂಧಿಸಲಾಗಿದೆ.

ವಂಚನೆ ಆರೋಪ: 'ಕೋಟಿಗೊಬ್ಬ' ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ FIR ದಾಖಲು
ಬಾಬು ಅವರು ಕೋಟಿಗೊಬ್ಬ, ಪೃಥ್ವಿ ಮತ್ತು ಕೋಟಿಗೊಬ್ಬ 2 ಸಿನಿಮಾ ನಿರ್ಮಾಣದ ಮೂಲಕ ಹೆಸರು ಗಳಿಸಿದ್ದಾರೆ.

ಚೆಕ್ ಬೌನ್ಸ್ ಕೇಸ್: ಮಾಣಿಕ್ಯ ಸಿನಿಮಾ ನಿರ್ಮಾಪಕ ಎಂ.ಎನ್ ಕುಮಾರ್ ಬಂಧನ
ನಟರೊಬ್ಬರಿಂದ ಸಾಲ ಪಡೆದುಕೊಂಡಿದ್ದ ಕುಮಾರ್ ಅವರು ಹಣವನ್ನು ವಾಪಸ್ ನೀಡಿರಲಿಲ್ಲ. ಕುಮಾರ್ ಅವರು ನೀಡಿದ್ದ ಚೆಕ್ ಸಹ ಬೌನ್ಸ್ ಆಗಿತ್ತು. ಕುಮಾರ್ ಅವರ ವಿರುದ್ಧ 4ನೇ ಎಸಿಎಂಎಂ ಕೋರ್ಟ್‌ನಲ್ಲಿ ದೂರು ದಾಖಲಾಗಿತ್ತು.

Rajinikanth ನಟನೆಯ Kabali ಸಿನಿಮಾ ನಿರ್ಮಾಪಕ KP Choudhary ಆತ್ಮಹತ್ಯೆ!
ಕೆಪಿ ಚೌಧರಿ ರಜನಿಕಾಂತ್ ಅಭಿನಯದ "ಕಬಾಲಿ" ಚಿತ್ರವನ್ನು ತೆಲುಗು ಭಾಷೆಯಲ್ಲಿ ನಿರ್ಮಿಸಿದ್ದರು. ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಹೊರಠಾಣೆಗೆ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಕೆ. ಮಂಜು ನಿರ್ಮಾಣದ 44ನೇ ಚಿತ್ರಕ್ಕೆ ಸ್ಮೈಲ್ ಶ್ರೀನು ಡೈರೆಕ್ಟರ್
‘ರಾಜಾಹುಲಿ’, ‘ರಾಮ ಶಾಮ ಭಾಮ’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಕೆ.ಮಂಜು ಈಗ ಯುವ ನಿರ್ದೇಶಕ ಸ್ಮೈಲ್ ಶ್ರೀನು ಜೊತೆ ಕೈಜೋಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿರುವ ದರ್ಶನ್ ಗೆ ಮತ್ತೊಂದು ಸಂಕಷ್ಟ; ಹಳೇಯ ಕೇಸಿಗೆ ಮರುಜೀವ
ಈ ಹಿಂದೆ `ಭಗವಾನ್ ಶ್ರೀ ಕೃಷ್ಣಾ’ ಎಂಬ ಭರತ್ ನಿರ್ಮಾಣದ ಸಿನಿಮಾದಲ್ಲಿ ಧೃವನ್ ನಾಯಕನಾಗಿ ನಟಿಸುತ್ತಿದ್ದ. 2020ರಲ್ಲಿ ನಿರ್ಮಾಪಕ ಭರತ್ ಸಿನಿಮಾದ ಶೂಟಿಂಗ್ ಶುರು ಮಾಡಿದ್ದರು.

ಅವಳೇ ನನ್ನ ಹೆಂಡ್ತಿ, ಸೋಲಿಲ್ಲದ ಸರದಾರ, ಅಣ್ಣ–ತಂಗಿ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಕೆ.ಪ್ರಭಾಕರ ನಿಧನ!
ಕೆಲ ದಿನಗಳ ಹಿಂದಷ್ಟೇ ಹೃದಯಾಘಾತಕ್ಕೆ ಒಳಗಾಗಿದ್ದ ಕೆ ಪ್ರಭಾಕರ್ ಅವರನ್ನು ಅಪೋಲೋ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಪಲಿಸದೆ ನಿಧನರಾಗಿದ್ದಾರೆ.

'ಘಟಶ್ರಾದ್ಧ' ನಿರ್ಮಾಪಕ ಸದಾನಂದ ಸುವರ್ಣ ವಿಧಿವಶ
ಅವರ ನಿರ್ದೇಶನದ 'ಕೋರ್ಟ್ ಮಾರ್ಷಲ್' ನಾಟಕವೂ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಂಬೈನಲ್ಲಿ ರಾತ್ರಿ ಶಾಲೆಯಲ್ಲಿ ಕಲಿತು, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.

