ಸಮಂತಾ ಅಕ್ಕಿನೇನಿ 10ನೇ ತರಗತಿ ರಿಪೋರ್ಟ್ ಕಾರ್ಡ್ ವೈರಲ್!
ತೆಲುಗು ಹಾಗೂ ತಮಿಳಿನ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರ ಹತ್ತನೇ ತರಗತಿಯ ರಿಪೋರ್ಟ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಸ್ ಆಗುತ್ತಿದೆ.

ಚೆನ್ನೈ: ತೆಲುಗು ಹಾಗೂ ತಮಿಳಿನ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರ ಹತ್ತನೇ ತರಗತಿಯ ರಿಪೋರ್ಟ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಸ್ ಆಗುತ್ತಿದೆ.
ಪಲ್ಲವರಂನ ಸೆಂಟ್ ಸ್ಟೀಫನ್ಸ್ ಮೆಟ್ರಿಕ್ಯುಲೇಷನ್ ಶಾಲೆ ನೀಡಿರುವ ರಿಪೋರ್ಟ್ ಕಾರ್ಡ್ ನ್ನು ಟ್ವಿಟರ್ ಬಳಕೆದಾರರು ಹೆಚ್ಚೆಚ್ಚು ಶೇರ್ ಮಾಡುತ್ತಿದ್ದಾರೆ.
ರಾಗ ಲಹರಿ ಎಂಬ ಟ್ವಿಟರ್ ಖಾತೆಯಲ್ಲಿ ಸಮಂತಾ ಅವರ ಹತ್ತನೇ ತರಗತಿ ರಿಪೋರ್ಟ್ ಕಾರ್ಡ್ ಶೇರ್ ಆಗಿದ್ದು, ಇದನ್ನು ಸಮಂತಾ ಪ್ರತಿ ಶೇರ್ ಮಾಡಿದ್ದಾರೆ.ಟಾಪರ್ ಎಲ್ಲೆಡೆ ಟಾಪರ್ ಆಗಿರುತ್ತಾರೆ ಎಂಬ ಶೀರ್ಷಿಕೆಯಲ್ಲಿ ಸಮಂತಾ ರಿಪೋರ್ಟ್ ಕಾರ್ಡ್ ಶೇರ್ ಆಗಿದೆ.
ಸೆಂಟ್ ಸ್ಟೀಪನ್ಸ್ ಶಾಲೆ ನೀಡಿರುವ ರಿಪೋರ್ಡ್ ಕಾರ್ಡ್ ಪ್ರಕಾರ ಸಮಂತಾ ಇಂಗ್ಲೀಷ್ ನಲ್ಲಿ 90, ಗಣಿತದಲ್ಲಿ 100, ಭೌತಶಾಸ್ತ್ರದಲ್ಲಿ 95, ಜೀವಶಾಸ್ತ್ರದಲ್ಲಿ 84, ಇತಿಹಾಸದಲ್ಲಿ 91 ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


