ಮತ್ತೊಂದು ತಾರಾ ಜೋಡಿ ವಿವಾಹಕ್ಕೆ ಸಜ್ಜಾಗುತ್ತಿದೆ ಸ್ಯಾಂಡಲ್ ವುಡ್!
ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ಭಾವಿ ಪತ್ನಿಗೆ ರಿಂಗ್ ಹಾಕಿದ್ದು, ಮತ್ತೊಂದು ಜೋಡಿಯೂ ಸದ್ಯದಲ್ಲೇ ಹಾರ ಬದಲಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬಂದಿವೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ ನಿನ್ನೆಯಷ್ಟೇ ಭಾವಿ ಪತ್ನಿಗೆ ರಿಂಗ್ ಹಾಕಿದ್ದು, ಮತ್ತೊಂದು ಜೋಡಿಯೂ ಸದ್ಯದಲ್ಲೇ ಹಾರ ಬದಲಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಂಡುಬಂದಿವೆ.
ಇತ್ತೀಚೆಗಷ್ಟೇ ‘ಲವ್ ಮಾಕ್‍ಟೇಲ್’ನಂತಹ ಸುಮಧುರ ಪ್ರೇಮಕಥೆಯನ್ನು ತೆರೆಗೆ ನೀಡಿರುವ ಜೋಡಿಯೇ ಲವ್ ನಲ್ಲಿ ಬಿದ್ದಿರೋದು ಹೌದು, ಈ ಚಿತ್ರದ ನಾಯಕ, ನಾಯಕಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ್ ನಾಗರಾಜ್ ಗೆ ಲವ್ ಆಗಿದ್ಯಂತೆ ಹೀಗಂತ ಸ್ವತಃ ಕೃಷ್ಣ ಅವರೇ ‘ಲವ್ ಮಾಕ್ ಟೇಲ್’ ಸಕ್ಸಸ್ ಪ್ರೆಸ್ ಮೀಟ್ ನಲ್ಲಿ ಹೇಳಿಕೊಂಡಿದ್ದಾರೆ.
ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲಿಗೆ ಇವರಿಬ್ಬರೂ ಜೋಡಿಯಾಗಿ ನಟಿಸಿದ್ದರು. ಬಳಿಕ ಚಂದ್ರಲೇಖ ರಿಟರ್ನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು, ಅಂದ ಹಾಗೆ ಇವರಿಬ್ಬರ ಲವ್ ಇವತ್ತಿನದಲ್ಲ, 5 ವರ್ಷಗಳಷ್ಟು ಹಳೆಯದು ಇವರಿಬ್ಬರ ಪ್ರೀತಿಗೆ ಮನೆಯವರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದ್ದು, ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಕೂಡ ಇದೆಯಂತೆ.
1989 ರಲ್ಲಿ ಹಾಸನದಲ್ಲಿ ಜನಿಸಿದ ಮಿಲನಾ ನಾಗರಾಜ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದ ಇವರು ರಾಜ್ಯಮಟ್ಟದ ಈಜುಗಾರ್ತಿ.
ಮಿಲನಾ ಬಳಿ ತಮ್ಮ ಪ್ರೀತಿಯನ್ನು ಕೃಷ್ಣ ಹೇಳಿಕೊಳ್ಳುತ್ತಿದ್ದಂತೆಯೇ ಮದುವೆ ಮಾತುಕತೆ ನಡೆಯಿತು. ಇಬ್ಬರ ಮನೆಯಲ್ಲೂ ಈ ಬಗ್ಗೆ ಮಾತುಕತೆ ಆಯಿತು. ಎರಡೂ ಕುಟುಂಬದವರಿಂದ ಒಪ್ಪಿಗೆ ಸಿಕ್ಕಿದ್ದರಿಂದ ಮದುವೆ ಆಗಲು ಮಿಲನಾ-ಕೃಷ್ಣ ನಿರ್ಧರಿಸಿದರಂತೆ. ಆದರೆ ಈ ವಿಚಾರವನ್ನು ಎಲ್ಲಿಯೂ ಅವರು ಹೇಳಿಕೊಂಡಿರಲಿಲ್ಲ. ಅವರ ಆಪ್ತರಿಗೆ ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ವಿಷಯ ತಿಳಿದಿತ್ತು. ಈಗ 'ಲವ್ ಮಾಕ್ಟೇಲ್' ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ. ಅವರಿಗೆ ಎಲ್ಲರಿಂದಲೂ ಶುಭ ಹಾರೈಕೆ ಕೇಳಿಬರುತ್ತಿದೆ.
ಪರಸ್ಪರ ಪ್ರೀತಿಸಿರುವ ಮಿಲನಾ-ಕೃಷ್ಣ ಮದುವೆ ಆಗಲು ತೀರ್ಮಾನಿಸಿದ್ದಾರಾದರೂ ದಿನಾಂಕ ನಿಗದಿ ಆಗಿಲ್ಲ. ಸದ್ಯ ಸಿನಿಮಾ ಚಟುವಟಿಕೆಗಳಲ್ಲಿ ಇಬ್ಬರೂ ಬ್ಯುಸಿ ಆಗಿರುವುದರಿಂದ ಸದ್ಯಕ್ಕಂತೂ ಮದುವೆ ಡೇಟ್ ಫಿಕ್ಸ್ ಆಗಿಲ್ಲ ಎಂದು ಮಿಲನಾ ಮಾಹಿತಿ ನೀಡಿದ್ದಾರೆ. 'ನಮ್ಮಿಬ್ಬರ ನಡುವೆ ಆತ್ಮೀಯತೆ ಇದ್ದಿದ್ದರಿಂದಲೇ 'ಲವ್ ಮಾಕ್ಟೇಲ್' ಸಿನಿಮಾವನ್ನು ಜೊತೆಯಾಗಿ ಮಾಡಲು ಸಾಧ್ಯವಾಯ್ತು. ಬೇರೆ ಬೇರೆ ಸಿನಿಮಾಗಳಲ್ಲಿ ನಾವಿಬ್ಬರೂ ಬ್ಯುಸಿ ಆಗಿದ್ದೇವೆ. ಹಾಗಾಗಿ ಮದುವೆ ದಿನಾಂಕದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


