ಸಿನಿಮಾ ಸುದ್ದಿ

ಹಿನ್ನೋಟ 2020: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳಿವರು!

ಹಿರಿತೆರೆ ಹಾಗೂ ಕಿರುತೆರೆ ಈ ವರ್ಷ ಮದುವೆಯ ಸಂಭ್ರಮದಲ್ಲಿದೆ. 2020ರಲ್ಲಿ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ವೈರಸ್, ಲಾಕ್ಡೌನ್ ನಿಂದಾಗಿ ಹಲವರ ಭರ್ಜರಿ ಮದುವೆಯ ಪ್ಲ್ಯಾನ್ ಗಳು ಉಲ್ಟಾ ಆಗಿತ್ತಾದರೂ, ಕೆಲವೇ ಕೆಲವರ ಸಾಕ್ಷಿಯಾಗಿ ದಾಂಪತ್ಯ ಜೀನನಕ್ಕೆ ಕಾಲಿಟ್ಟಿದ್ದಾರೆ.

ಹಿನ್ನೋಟ 2020: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳಿವರು!
ಸಂಗ್ರಹ ಚಿತ್ರ
Published On :

ಹಿರಿತೆರೆ ಹಾಗೂ ಕಿರುತೆರೆ ಈ ವರ್ಷ ಮದುವೆಯ ಸಂಭ್ರಮದಲ್ಲಿದೆ. 2020ರಲ್ಲಿ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ವೈರಸ್, ಲಾಕ್ಡೌನ್ ನಿಂದಾಗಿ ಹಲವರ ಭರ್ಜರಿ ಮದುವೆಯ ಪ್ಲ್ಯಾನ್ ಗಳು ಉಲ್ಟಾ ಆಗಿತ್ತಾದರೂ, ಕೆಲವೇ ಕೆಲವರ ಸಾಕ್ಷಿಯಾಗಿ ದಾಂಪತ್ಯ ಜೀನನಕ್ಕೆ ಕಾಲಿಟ್ಟಿದ್ದಾರೆ. 2020ರಲ್ಲಿ ಸಪ್ತಪದಿ ತುಳಿದ ಸೆಲೆಬ್ರಿಟಿಗಳಾರು...ಆ ಬಗ್ಗೆ ಇಲ್ಲಿದೆ ಮಾಹಿತಿ....

ಕಾಜಲ್ ಅಗರ್ವಾಲ್-ಗೌತಮ್ ಕಿಚ್ಲು 

Story image


ತೆಲುಗು, ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಕಾಜಲ್ ಅಗರ್ವಾಲ್ ಅವರು, ಉದ್ಯಮಿ ಗೌತಮ್ ಕಿಚ್ಲು ಅವರೊಂದಿಗೆ ಅಕ್ಟೋಬರ್ 30 ರಂದು ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ರಾಣಾ ದಗ್ಗುಬಾಟಿ-ಮಿಹಿಕಾ ಬಜಾಜ್

Story image

ಬಾಹುಬಲಿ ನಟ ರಾಣಾ ದಗ್ಗುಬಾಟಿ ಮತ್ತು ಇವೆಂಟ್ ಮ್ಯಾನೆಜ್ಮೆಂಟ್ ಸಂಸ್ಥೆಯೊಂದರ ಸಂಸ್ಥಾಪಕಿ ಮಿಹಿಕಾ ಬಜಾಜ್ ಅವರೊಂದಿಗೆ ಆಗಸ್ಟ್ 8 ರಂದು ಹೈದರಾಬಾದ್ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. 

ರಾಧಿಕಾ-ಶ್ರವಂತ್

Story image


ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಸೌಂದರ್ಯ ಎಂಬ ಖಳನಾಯಕಿ ಪಾತ್ರದಲ್ಲಿ ನಟಿಸಿ ಖ್ಯಾತಿಗಳಿಸಿದ್ದ ನಟಿ ರಾಧಿಕಾ ಅವರು ನಟ, ನಿರೂಪಕ ಶ್ರವಂತ್ ಅವರ ಜೊತೆ ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಶಿಲ್ಪಾ-ರವಿ

Story image


ಜೀವ ಹೂವಾಗಿದೆ' ಧಾರಾವಾಹಿ ನಟಿ ಶಿಲ್ಪಾ ರವಿ ಅವರು ನಟ ದರ್ಶಕ್ ಗೌಡ ಅವರ ಜೊತೆ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸಪ್ತಪದಿ ತುಳಿದರು. 

ನೇಹಾ ಕಕ್ಕರ್-ರೋಹನ್ ಪ್ರೀತ್ ಸಿಂಗ್

Story image


ಅಕ್ಟೋಬರ್ 24ರಂದು ಖ್ಯಾತ ಗಾಯಕಿ ನೇಹಾ ಕಕ್ಕರ್ ಹಾಗೂ ನಟ ರೋಹನ್ ಪ್ರೀತ್ ಸಿಂಗ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೆಹಲಿಯಲ್ಲಿ ನಡೆದ ಸಾಂಪ್ರದಾಯಿಕ ಸಿಕ್ಖ್ ಶೈಲಿಯ ಸಮಾರಂಭದಲ್ಲಿ ವಿವಾಹ ಹಾಗೂ ಚಂಡೀಗಢದಲ್ಲಿ ರಿಸೆಪ್ಷನ್ ನಡೆಯಿತು. 

ಸುಪ್ರಿಯಾ ರಾವ್-ವಿಜಯ್

Story image


ಮಗಳು ಜಾನಕಿ' ಧಾರಾವಾಹಿ ನಟಿ ಸುಪ್ರಿಯಾ ರಾವ್ ಅವರು ಬಹುಕಾಲದ ಗೆಳೆಯ ವಿಜಯ್ ಜೊತೆ ಲಾಕ್ ಡೌನ್‌ ಸಂದರ್ಭದಲ್ಲಿಯೇ ಸರಳವಾಗಿ ಚಿತ್ರದುರ್ಗದ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆದಿತ್ಯಾ ನಾರಾಯಣ್-ಶ್ವೇತಾ ಅಗರ್ವಾಲ್

Story image


ಗಾಯಕ ಆದಿತ್ಯಾ ನಾರಾಯಣ್ ಅವರ ದೀರ್ಘಕಾಲದ ಗೆಳತಿ ಶ್ವೇತ ಅಗರ್ವಾಲ್ ಅವರೊಂದಿಗೆ ಡಿ.1ರಂದು ಮುಂಬೈನಲ್ಲಿ ವಿವಾಹವಾದರು. ಆದಿತ್ಯ ಖ್ಯಾತ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರ ಪುತ್ರರಾಗಿದ್ದಾರೆ. 

ಚೈತ್ರಾ ರೆಡ್ಡಿ-ರಾಕೇಶ್ ಸಮಾಲಾ

Story image


ಅವನು ಮತ್ತೆ ಶ್ರಾವಣಿ' ಧಾರಾವಾಹಿಯ ನಟಿ ಚೈತ್ರಾ ರೆಡ್ಡಿ ಅವರು ನವೆಂಬರ್ ತಿಂಗಳಲ್ಲಿ ಸಿನಿಮಾಟೋಗ್ರಾಫರ್, ನಿರ್ಮಾಪಕ ರಾಕೇಶ್ ಸಮಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಸನಾ ಖಾನ್-ಮುಫ್ತಿ ಅನಾಸ್

Story image


ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಸನಾ ಖಾನ್, ಗುಜರಾತ್ ಮೂಲದ ಮುಫ್ತಿ ಅನಾಸ್ ಸಯೀದ್ ಅವರೊಂದಿಗೆ ನ.20 ರಂದು ವಿವಾಹವಾದರು. 

ನಿಹಾರಿಕಾ-ಚೈತನ್ಯ

Story image


ತೆಲುಗು ನಟಿ, ನಿರ್ಮಾಪಕಿ ನಿಹಾರಿಕಾ ಅವರು ಡಿಸೆಂಬರ್ 9ರಂದು ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಹೈದರಾಬಾದ್ ಮೂಲದ ಟೆಕ್ಕಿ ಚೈತನ್ಯ ಎಂಬುವವರೊಂದಿಗೆ ವಿವಾಹವಾದರು.

ನಿಖಿಲ್ ಕುಮಾರಸ್ವಾಮಿ-ರೇವತಿ

Story image


ಕನ್ನಡ ನಟ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಕಾಂಗ್ರೆಸ್ ಮುಖಂಡ ಎಂ.ಕೃಷ್ಣಪ್ಪ ಅವರ ಮೊಮ್ಮಗಳು ರೇವತಿ ಏಪ್ರಿಲ್.17ರಂದು ಸಪ್ತಪದಿ ತುಳಿದರು.

ನಿತಿನ್ ರೆಡ್ಡಿ-ಶಾಲಿನಿ

Story image


ತೆಲುಗು ಖ್ಯಾತ ನಟ ನಿತಿನ್ ರೆಡ್ಡಿ ಅವರು ತಮ್ಮ ದೀರ್ಘಕಾಲದ ಗೆಳತಿ ಶಾಲಿನಿ ಅವರೊಂದಿಗೆ ಜುಲೈ.26 ರಂದು ಹೈದರಾಬಾದ್ ನ ತಾಜ್ ಫಾಲುಕ್ ನಮಾ ಅರಮನೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾದರು. 

ಸುಜೀತ್ ರೆಡ್ಡಿ-ಪ್ರಾವಲ್ಲಿಕಾ

Story image


ಸಾಹೋ ನಿರ್ದೇಶಕ ಸುಜೀತ್ ರೆಡ್ಡಿಯವರು ದಂತ ವೈದ್ಯೆಯಾಗಿರುವ ಪ್ರೇಯಸಿ ಪ್ರಾವಲ್ಲಿಕಾ ಅವರೊಂದಿಗೆ ಆಗಸ್ಟ್ 2 ರಂದು ಹೈದರಾಬಾದ್ ನಲ್ಲಿ ವಿವಾಹವಾದರು. 

ಮಿಯಾ ಜಾರ್ಜ್-ಅಶ್ವಿನ್ ಫಿಲಿಪ್

Story image


ಮಾಲಿವುಡ್ ನಟಿ ಮಿಯಾ ಜಾರ್ಜ್ ಅವರು ಸೆಪ್ಟೆಂಬರ್ 12 ರಂದು ಕೊಚ್ಚಿಯಲ್ಲಿ ನಡೆದ ಕ್ರಿಶ್ಚಿಯನ್ ಸಮಾರಂಭದಲ್ಲಿ ಉದ್ಯಮಿ ಅಶ್ವಿನ್ ಫಿಲಿಪ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ವಿನಾಯಕ್ ಜೋಶಿ-ವರ್ಷ ಬೆಳವಾಡಿ

Story image


ಕನ್ನಡ ಚಿತ್ರರಂಗದ ಅದ್ಭುತ ಯುವ ಕಲಾವಿದ, ನಿರೂಪಕ ವಿನಾಯಕ್ ಜೋಶಿ ಹಾಗೂ ಬಾಲ್ಯದ ಗೆಳತಿ, ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷ ಬೆಳವಾಡಿ ಆಗಸ್ಟ್ 28ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಮಯೂರಿ-ಅರುಣ್

Story image


ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜನರ ಮನಗೆದ್ದು ಹೆಸರು ಗಳಿಸಿದ್ದ ಸ್ಯಾಂಡಲ್'ವುಡ್'ನ ಖ್ಯಾತ ನಟಿ ಮಯೂರಿಯವರು ಬಾಲ್ಯದ ಗೆಳೆಯ ಅರುಣ್ ಅವರೊಂದಿಗೆ ಜೂನ್.12ರಂದು ವಿವಾಹವಾದರು. 

ಚಂದು ಬಿ ಗೌಡ-ಶಾಲಿನಿ

Story image


ನಟ ಚಂದು ಬಿಗೌಡ ಅವರು ಮಾಡೆಲಿಂಗ್ ಚೆಲುವೆ ಶಾಲಿನಿ ಅವರೊಂದಿಗೆ ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ವಿವಾಹವಾದರು. 

ನವ್ಯಾ ರಾವ್- ವರುಣ್

Story image


ಪುನರ್ ವಿವಾಹ ಹಾಗೂ ಅರಗಿಣಿ ಧಾರಾವಾಹಿಯಲ್ಲಿ ಮಿಂಚಿರುವ ನಟಿ ನವ್ಯಾ ರಾವ್ ಅವರು ಸಾಫ್ಟ್ ವೇರ್ ಉದ್ಯಮಿ ವರುಣ್ ಅವರೊಂದಿಗೆ ವಿವಾಹವಾದರು. 

ಹರ್ಷಿತಾ ವೆಂಕಟೇಶ್-ವಿನಯ್

Story image


ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಹರ್ಷಿತಾ ವೆಂಕಟೇಶ್ ಅವರು ವಿನಯ್ ಅವರು ಆಗಸ್ಟ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.