ಸಿನಿಮಾ ಸುದ್ದಿ

ಇತ್ತೀಚೆಗೆ ನಿಧನರಾದ  ನಟನ ಪೋಸ್ಟ್ ಮಾರ್ಟಮ್ ಮಾಡಿಲ್ಲ ಏಕೆ? ಸ್ಟಾರ್ ನಿರ್ದೇಶಕರ ಪ್ರಶ್ನೆಗೆ ಸ್ಯಾಂಡಲ್ ವುಡ್ ತತ್ತರ!

ಸ್ಯಾಂಡಲ್ ವುಡ್ ನ ಕೆಲವು ನಟ ನಟಿಯರು, ಸಂಗೀತ ನಿರ್ದೇಶಕರಿಗೆ ಡ್ರಗ್ ಮಾಫಿಯಾದ ಜೊತೆ ನಂಟಿದೆ ಎನ್ನುವ ವಿಷಯ ಗಾಂಧಿನಗರಗದಲ್ಲಿ ಸ್ಫೋಟಗೊಂಡಿದೆ. ಡ್ರಗ್ಸ್ ಮಾಫಿಯಾ ಕುರಿತು ಸ್ಯಾಂಡಲ್​ ವುಡ್​ನ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸ್ಫೋಟಕ ಮಾಹಿತಿ ಸಿಡಿಸಿದ್ದಾರೆ.

ಇತ್ತೀಚೆಗೆ ನಿಧನರಾದ  ನಟನ ಪೋಸ್ಟ್ ಮಾರ್ಟಮ್ ಮಾಡಿಲ್ಲ ಏಕೆ? ಸ್ಟಾರ್ ನಿರ್ದೇಶಕರ ಪ್ರಶ್ನೆಗೆ ಸ್ಯಾಂಡಲ್ ವುಡ್ ತತ್ತರ!
ಚಿರಂಜೀವಿ ಸರ್ಜಾ
Published On :

ಸ್ಯಾಂಡಲ್ ವುಡ್ ನ ಕೆಲವು ನಟ ನಟಿಯರು, ಸಂಗೀತ ನಿರ್ದೇಶಕರಿಗೆ ಡ್ರಗ್ ಮಾಫಿಯಾದ ಜೊತೆ ನಂಟಿದೆ ಎನ್ನುವ ವಿಷಯ ಗಾಂಧಿನಗರಗದಲ್ಲಿ ಸ್ಫೋಟಗೊಂಡಿದೆ. ಡ್ರಗ್ಸ್ ಮಾಫಿಯಾ ಕುರಿತು ಸ್ಯಾಂಡಲ್​ ವುಡ್​ನ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸ್ಫೋಟಕ ಮಾಹಿತಿ ಸಿಡಿಸಿದ್ದಾರೆ.

ಇತ್ತೀಚೆಗೆ ನಿಧನರಾದ ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಲಿಲ್ಲ..? ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವರು ಸಾಯಲು ಕಾರಣವೇನು..? ಪರೀಕ್ಷೆ ಮಾಡಿಸಿದ್ದರೆ ಎಲ್ಲಾ ಬಯಲಾಗುತ್ತಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಪೊಲೀಸರಿಗೆ ರಾಜಕೀಯ ಒತ್ತಡವಿತ್ತು. ಯಾವ ರಾಜಕೀಯ ವ್ಯಕ್ತಿ ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಿದೆ” ಎಂದು ನಟ ಚಿರಂಜೀವಿ ಸಾವಿನ ಬಗ್ಗೆ ಇಂದ್ರಜಿತ್ ಅನುಮಾನ ವ್ಯಕ್ತಪಡಿಸಿದ್ದಾರೆ.

'ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಸೌತ್‌ ಎಂಡ್‌ ಸರ್ಕಲ್‌ ಬಳಿ ಕಾರು ಅಪಘಾತ ಆದಾಗ ಅದರಲ್ಲಿ ಮಾದಕ ವಸ್ತು ಸಿಕ್ತು ಎನ್ನಲಾಗಿತ್ತು. ಆದರೆ ನಂತರ ಅದರ ತನಿಖೆ ಏನಾಯಿತು? ಅದರಲ್ಲಿ ಕೆಲವರ ಹೆಸರು ಕೇಳಿಬಂದರೂ ಯಾಕೆ ಶಿಕ್ಷೆ ಆಗಲಿಲ್ಲ' ಎಂದು ಅವರು ಪ್ರಶ್ನಿಸಿದ್ದಾರೆ. ಒಟ್ಟಾರೆ ಈಗ ನಡೆಯುತ್ತಿರುವ ಎಲ್ಲ ಘಟನೆಗಳ ಬಗ್ಗೆ ಇಂದ್ರಜಿತ್‌ ಮಾತನಾಡಿರುವುದು ಹೊಸ ಸಂಚಲನಕ್ಕೆ ಕಾರಣ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.