ಸಿನಿಮಾ ಸುದ್ದಿ

ಆನೆ ದತ್ತು ಸ್ವೀಕರಿಸಿದ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 

ಮೈಸೂರು ಮೃಗಾಲಯದಲ್ಲಿ ಪಾರ್ವತಿ ಎಂಬ ಆನೆಯನ್ನು ಚಿತ್ರನಟ ಡಾ. ಶಿವರಾಜ್ ಕುಮಾರ್ ದತ್ತು ಸ್ವೀಕರಿಸಿದ್ದಾರೆ.

ಆನೆ ದತ್ತು ಸ್ವೀಕರಿಸಿದ ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 
ನಟ ಡಾ. ಶಿವರಾಜ್ ಕುಮಾರ್
Published On :

ಬೆಂಗಳೂರು: ಮೈಸೂರು ಮೃಗಾಲಯದಲ್ಲಿ ಪಾರ್ವತಿ ಎಂಬ ಆನೆಯನ್ನು ಚಿತ್ರನಟ ಡಾ. ಶಿವರಾಜ್ ಕುಮಾರ್ ದತ್ತು ಸ್ವೀಕರಿಸಿದ್ದಾರೆ.ಶಿವರಾಜ್‍ಕುಮಾರ್  75 ಸಾವಿರ ರೂ ಪಾವತಿಸಿ ಮೃಗಾಲಯದ “ಭಾರತದ ಆನೆ - ಪಾರ್ವತಿಯನ್ನು ದತ್ತು ಸ್ವೀಕರಿಸಿದ್ದು, ಮುಂದಿನ ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ ಎಂದು ಮೃಗಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ. 

ಕೋವಿಡ್-19 ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್ ಭಾರತದ ಆನೆ ಪಾರ್ವತಿಯನ್ನು 20-08-2020 ರಿಂದ 19-08- 2021ರವರೆಗೆ ದತ್ತು ಪಡೆದಿದ್ದಾರೆ. ಈ ಮೂಲಕ ಮೃಗಾಲಯ ಮತ್ತು ಪ್ರಾಣಿಗಳ ನಿರ್ವಹಣೆಗೆ ಸಹಕಾರ ನೀಡಿರುವುದಕ್ಕೆ ಮೈಸೂರು ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಮೃಗಾಲಯದ ಆನೆ ಐರಾವತಿ ಜನ್ಮ ನೀಡಿದ್ದ ಹೆಣ್ಣಾನೆಗೆ 2017ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪಾರ್ವತಿ ಎಂದು ಹೆಸರಿಟ್ಟಿದ್ದರು. ಅದೇ ಆನೆಯನ್ನು ಶಿವರಾಜ್ ಕುಮಾರ್ ದತ್ತು ಪಡೆಯುವ ಮೂಲಕ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.