ಆನೆ

ಮೈಸೂರು ದಸರಾ: ಗಜಪಡೆ ತೂಕ ಪರೀಕ್ಷೆ ಪೂರ್ಣ; ತೂಕದಲ್ಲಿ 9 ಆನೆಗಳ ಪೈಕಿ ಶ್ರೀಕಾಂತನೇ ನಂ.1
ಮೊದಲ ತಂಡದಲ್ಲಿ ಶ್ರೀಕಾಂತ 5,770 ಕೆ.ಜಿ. ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಏಕಲವ್ಯ 5,610 ಕೆ.ಜಿ. ತೂಕ ಹೊಂದಿದೆ.

ಚಿಕ್ಕಮಗಳೂರು: ಇಬ್ಬರನ್ನು ತುಳಿದು ಕೊಂದಿದ್ದ ಆನೆ ಸೆರೆ!
ಕುದುರೆಮುಖ ವನ್ಯಜೀವಿ ವಿಭಾಗದ ಕೆರೆಕಟ್ಟೆ ವ್ಯಾಪ್ತಿಯಲ್ಲಿ ಉಮೇಶ್ (43) ಮತ್ತು ಹರೀಶ್ (42) ಅಕ್ಟೋಬರ್ 31 ರಂದು ಆನೆ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಕಬ್ಬಿನ ಆಸೆಗೆ ಲಾರಿ ಹತ್ತಲು ಹೋದ ಕಾಡಾನೆ: ಗಾಜು ಪುಡಿಪುಡಿ; Video
ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಕಾಡಾನೆ ತಡೆದು ಅದರ ಮುಂಭಾಗದ ಮೇಲೆ ಕಾಲಿಟ್ಟು ಕಬ್ಬು ಕಿತ್ತಿದೆ. ಆನೆ ಕಾಲಿಟ್ಟಿದ್ದೇ ತಡ ಲಾರಿಯ ಗಾಜು ಪುಡಿ ಪುಡಿಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ: ಎಸ್ಟೇಟ್ ಬಳಿ ಆನೆ ಹಿಂಡು ಪ್ರತ್ಯಕ್ಷ; ಜನರಲ್ಲಿ ಹೆಚ್ಚಿದ ಆತಂಕ
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಉಪಟಣ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದ ನಂತರ ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತು. ಈ ವೇಳೆ ಎಸ್ಟೇಟ್'ವೊಂದರ ಬಳಿ 30 ಆನೆಗಳ ಹಿಂಡು ಇರುವುದು ಪತ್ತೆಯಾಗಿದೆ.

ರಥಯಾತ್ರೆ ವೇಳೆ ಅಡ್ಡಾದಿಡ್ಡಿ ಓಡಿದ ಆನೆಗಳು: ಹಲವರಿಗೆ ಗಾಯ; Video ವೈರಲ್
ರಥಯಾತ್ರೆಯಲ್ಲಿ ಎರಡರಿಂದ ಮೂರು ಆನೆಗಳು ಭಾಗಿಯಾಗಿದ್ದವು. ಖಾಡಿಯಾ ಪ್ರದೇಶದಲ್ಲಿ ಆನೆ ನಿಯಂತ್ರಣ ಕಳೆದುಕೊಂಡು ಭಯಭೀತವಾಗಿ ಅಡ್ಡಾದಿಟ್ಟಿ ಓಡಿದೆ.

ಬಾಳೆಹಣ್ಣುಗಳನ್ನು ನಿಷೇಧಿಸಿದ ಹಂಪಿ ವಿರೂಪಾಕ್ಷ ದೇವಾಲಯ; ಕಾರಣ ಹೀಗಿದೆ...
ಬಾಳೆಹಣ್ಣು ನಿಷೇಧವನ್ನು ನಿಮ್ಮ ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡು ವಿವಾದ ಮಾಡಬೇಡಿ ಎಂದು ಹನುಮಂತಪ್ಪ ಮನವಿ ಮಾಡಿದರು.

ಬನ್ನೇರುಘಟ್ಟ ಅರಣ್ಯದಲ್ಲಿ ಕಾಡಾನೆ ಸಾವು; ಮಾನವ ಹಸ್ತಕ್ಷೇಪ ಇಲ್ಲ ಎಂದ ಇಲಾಖೆ
ಅರಣ್ಯ ಅಧಿಕಾರಿಗಳ ಪ್ರಕಾರ, ಸಂಭವನೀಯ ಆಘಾತ ಮತ್ತು ಹರ್ಪಿಸ್ ಸೋಂಕಿನಿಂದ ಪ್ರಾಣಿ ಸಾವನ್ನಪ್ಪಿದೆ. ಶವಪರೀಕ್ಷೆಯಲ್ಲಿ ವಿದ್ಯುದಾಘಾತ, ರಸ್ತೆ ಅಪಘಾತ ಅಥವಾ ಗುಂಡಿನ ದಾಳಿಯಂತಹ ಪ್ರಾಣಿಗಳ ಸಾವಿನಲ್ಲಿ ಯಾವುದೇ ಮಾನವ ಹಸ್ತಕ್ಷೇಪವಿಲ್ಲ ಎಂದು ತಿಳಿದುಬಂದಿದೆ.

ಬನ್ನೇರುಘಟ್ಟ ಉದ್ಯಾನವನದಲ್ಲಿ ಆನೆ ಸ್ನಾನ ಮಾಡಿಸುವಾಗ ಕೆರೆಯಲ್ಲಿ ಮುಳುಗಿ ಕಾವಾಡಿಗ ಸಾವು
ಆನೆಯ ಮೈತೊಳೆಯುವಾಗ ಆಕಸ್ಮಿಕವಾಗಿ ಆನೆಯು ಗಾಬರಿಗೊಂಡು ಕೆರೆಯ ಆಳಕ್ಕೆ ಇಳಿದ ಪರಿಣಾಮ ಕೆರೆಯ ಆಳದಲ್ಲಿ ಮುಳುಗಿ ಕಾವಾಡಿಗ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿಯೇ ಇದ್ದ ಇತರೆ ಸಿಬ್ಬಂದಿ ಅವರನ್ನು ರಕ್ಷಿಸಿಸಲು ಪ್ರಯತ್ನಿಸಿದರೂ, ಸಫಲವಾಗಿಲ್ಲ.

ಸಿಡಿಮದ್ದು ತಾಲೀಮು: ಭಾರೀ ಶಬ್ದಕ್ಕೆ ಬೆದರಿದ ದಸರಾ ಆನೆಗಳು, ಚದುರಿ ಓಡಿದ ಕುದುರೆಗಳು..!
ಪ್ರಾಣಿಗಳನ್ನ ಒಗ್ಗಿಸಲು ಮೊದಲ ಹಂತದ ತಾಲೀಮು ಗುರುವಾರ ನಡೆಯಿತು. ನಗರದ ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಯಿತು.

