ನಟನಾಗಿ, ಪ್ರೇಕ್ಷಕನಾಗಿ ಕುತೂಹಲಕಾರಿ ಚಿತ್ರಕಥೆ ನನ್ನನ್ನು ಆಕರ್ಷಿಸುತ್ತದೆ: ಧೀರೇನ್ ರಾಜ್'ಕುಮಾರ್
ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ಸ್ಯಾಂಡಲ್ ವುಡ್ ನಟ ರಾಮ್ ಕುಮಾರ್ ಅವರ ಪುತ್ರ ಧೀರೇನ್ ರಾಮ್ ಕುಮಾರ್ ಅವರು ಸ್ಯಾಂಡಲ್'ವುಡ್'ಗೆ ಕಾಲಿಟ್ಟಿದ್ದು, ಧೀರೇನ್ ನಟನೆಯ ಮೊದಲ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

ಬೆಂಗಳೂರು: ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ಸ್ಯಾಂಡಲ್ ವುಡ್ ನಟ ರಾಮ್ ಕುಮಾರ್ ಅವರ ಪುತ್ರ ಧೀರೇನ್ ರಾಮ್ ಕುಮಾರ್ ಅವರು ಸ್ಯಾಂಡಲ್'ವುಡ್'ಗೆ ಕಹಲಿಟ್ಟಿದ್ದು, ಧೀರೇನ್ ನಟನೆಯ ಮೊದಲ ಚಿತ್ರ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಧೀರೇನ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪೈಸ್ ವೊಂದನ್ನು ನೀಡಿದೆ.
ಧೀರೇನ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರ ತಂಡ ಶಿವ 143 ಚಿತ್ರದ ನ್ಯೂ ಲುಕ್ ನ್ನ ಬಿಡುಗಡೆ ಮಾಡಿದೆ. ಪೋಸ್ಟರ್ ನಲ್ಲಿ ಧೀರೇನ್ ಅವರು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿತ್ತು, ಅಭಿಮಾನಿಗಳನ್ನು ಸೆಳೆಯುತ್ತಿದೆ.
ಧೀರೇನ್ ಅವರು ಶಿವ 143 ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಅಲ್ಲದೆ ಚಿತ್ರ ಈಗಾಗಲೇ ಡಬ್ಬಿಂಗ್ ಹಂತ ಕೂಡ ತಲುಪಿದೆ.
ಲಾಕ್ ಡೌನ್ ನಡುವಲ್ಲೇ ಧೀರೇನ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಭಿಮಾನಿಗಳ ವಿಭಿನ್ನ ಗಿಫ್ಟ್'ಗೆ ಫಿದಾ ಆಗಿದ್ದಾರೆ.
ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನನ್ನ ಪರವಾಗಿ ಶಿವಣ್ಣ ಹಾಗೂ ಅಪ್ಪು ಅವರ ಅಭಿಮಾನಿಗಳು ಬಡವರಿಗೆ ಆಹಾರವನ್ನು ನೀಡಿದ್ದಾರೆ. ಅಲ್ಲದೆ, ಈ ಕುರಿತ ವಿಡಿಯೋವನ್ನು ಮಾಡಿ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಾರೆ. ಇದು ಸಾಕಷ್ಟು ವಿಭಿನ್ನ ಹಾಗೂ ವಿಶಿಷ್ಟವಾಗಿದೆ ಎಂದು ಧೀರೇನ್ ಅವರು ಹೇಳಿದ್ದಾರೆ.
ಅಭಿಮಾನಿಗಳು ಹೆಚ್ಚಾಗುವಂತೆ ಮಾಡುವುದು ತಂತ್ರವಲ್ಲ, ಜನರು ನನ್ನನ್ನು ಇಷ್ಟಪಟ್ಟಾಗ, ನಾನೂ ಕೂಡ ಅವರನ್ನು ಇಷ್ಟಪಡುತ್ತೇನೆ. ನಮ್ಮ ಕುಟುಂಬ ಮಾಡಿರುವುದು ನಮಗೆ ಹೆಮ್ಮೆ ತಂದಿದೆ. ಅದನ್ನೇ ಇದೀಗ ನಾನು ಮಾಡಬೇಕೆಂದುಕೊಂಡಿರುವೆ. ವೃತ್ತಿಪರತೆಯಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಮುಂದಿರಬೇಕು. ಕುಟುಂಬದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತೇನೆಂದು ತಿಳಿಸಿದ್ದಾರೆ.
ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡಿನ ಚಿತ್ರೀಕರಣವೊಂದು ನಡೆಯಬೇಕಿದೆ. ಲಾಕ್'ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸಾಧ್ಯವಾಗಿಲ್ಲ. ಚಿತ್ರೀಕರಣ ಪೂರ್ಣಗೊಳ್ಳಲಿ ಎಂದು ಕಾಯುತ್ತಿದ್ದೇನೆ. ಚಿತ್ರೀಕರಣ ಪೂರ್ಣಗೊಳ್ಳುತ್ತಿದ್ದಂತೆಯೇ ಗಡ್ಡ ಹಾಗೂ ಉದ್ದನೆಯ ಕೂದಲನ್ನು ತೆಗೆಯಬೇಕು ಎಂದಿದ್ದಾರೆ.
ಕೋರೋನಾ ಪರಿಸ್ಥಿತಿ ಈ ಮಟ್ಟಕ್ಕೆ ಬರುತ್ತದೆ ಎಂದು ಯಾರೂ ಚಿಂತಿಸಿರಲಿಲ್ಲ. ನಮ್ಮನ್ನು ನಾವೇ ಲಾಕ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಏನೇ ಆದರೂ ಪರಿಸ್ಥಿತಿಯನ್ನು ಎದುರಿಸಲೇಬೇಕಿದೆ, ಮುಂದೆ ಸಾಗಲೇಬೇಕಿದೆ ಎಂದು ಹೇಳಿದ್ದಾರೆ.
ಒಬ್ಬ ನಟನಾಗಿ ಹಾಗೂ ಪ್ರೇಕ್ಷನಾಗಿ ತ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟೀರಿಯಸ್ ನಂತಹ ಚಿತ್ರಗಳನ್ನು ನಾನೂ ಇಷ್ಟಪಡುತ್ತೇನೆ. ಕುತೂಹಲಕಾರಿ ಚಿತ್ರಕಥೆಗಳು ನನ್ನನ್ನು ಹೆಚ್ಚು ಆಕರ್ಷಕಣೆಗೊಳಗಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


