ಸಿನಿಮಾ ಸುದ್ದಿ

ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ-ಭಾವಿ ಪತ್ನಿಗೆ ಬರ್ತಡೆ ವಿಶ್ ಹೇಳಿದ ಡಾರ್ಲಿಂಗ್ ಕೃಷ್ಣ

ಲವ್​ ಮಾಕ್​ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿಜಜೀವನದಲ್ಲಿ ಸಹ ಪ್ರೇಮಿಗಳು ಎನ್ನುವುದು ಎಲ್ಲರಿಗೆ ತಿಳಿದ ವಿಚಾರ. ಇಂದು ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಿದ್ದು ಇದಕ್ಕಾಗಿ ಡಾರ್ಲಿಂಗ್ ಕೃಷ್ಣ ವಿಶೇಷ ಚಿತ್ರ ಹಾಗೂ ಸಂದೇಶ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮಿಬ್ಬರ ನಡುವಿನ ಈ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ.

ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ-ಭಾವಿ ಪತ್ನಿಗೆ ಬರ್ತಡೆ ವಿಶ್ ಹೇಳಿದ ಡಾರ್ಲಿಂಗ್ ಕೃಷ್ಣ
ಭಾವಿ ಪತ್ನಿಗೆ ಬರ್ತಡೆ ವಿಶ್ ಹೇಳಿದ ಡಾರ್ಲಿಂಗ್ ಕೃಷ್ಣ
Published On :

ಲವ್​ ಮಾಕ್​ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿಜಜೀವನದಲ್ಲಿ ಸಹ ಪ್ರೇಮಿಗಳು ಎನ್ನುವುದು ಎಲ್ಲರಿಗೆ ತಿಳಿದ ವಿಚಾರ. ಇಂದು ನಟಿ ಮಿಲನಾ ನಾಗರಾಜ್ ಹುಟ್ಟುಹಬ್ಬವಿದ್ದು ಇದಕ್ಕಾಗಿ ಡಾರ್ಲಿಂಗ್ ಕೃಷ್ಣ ವಿಶೇಷ ಚಿತ್ರ ಹಾಗೂ ಸಂದೇಶ ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮಿಬ್ಬರ ನಡುವಿನ ಈ ಲವ್ ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ.

Story image

ನಿಧಿಮಾ (ಮಿಲನಾ ನಾಗರಾಜ್) ಹುಟ್ಟುಹಬ್ಬಕ್ಕೆ ಶುಭಕೋರಿರುವ ಡಾರ್ಲಿಂಗ್ ಕೃಷ್ಣ ಅವರಿಗೆ ಲಾಕ್ ಡೌನ್ ಕಾರಣ ಆಕೆಯನ್ನು ಭೇಟಿಯಾಗಲು ಸಾಧ್ಯವಾಗದ ಬೇಸರವೂ ಇದೆ.

ಇನ್ನು ಹಳೆಯ ಚಿತ್ರವೊಂದನ್ನು ಹಂಚಿಕೊಂಡಿರುವ ನಟ, ನಿರ್ದೇಶಕ "ನಿನ್ನ ಪ್ರೀತಿ ಪರಿಶುದ್ದವಾಗಿದೆ. ನಿನ್ನ ಹೃದಯ ಶುದ್ದವಾಗಿದೆ.ನಿನ್ನ  ನಗು ಶುದ್ಧ ಶುದ್ದವಾಗಿದೆ.ನಿನ್ನನ್ನು ಪಡೆಯುವ ನಾನೇ ಅದೃಷ್ಟವಂತ. , ನಿಜವಾದ ಸಂತೋಷ ಎಂದರೇನೆಂದು ನೀನು ನನಗೆ ತೋರಿಸಿದೆ. ನಿಧಿಮಾ ಪಾತ್ರ ಸೃಷ್ಟಿಸಲು ನನಗಿದುವೇ ಪ್ರೇರಣೆಯಾಗಿದೆ. ಮಿಲನಾಗೆ ಜನ್ಮದಿನದ ಶುಭಾಶಯಗಳು

"ನಿಧಿಮಾ ಬರೀ ಒದೆಯುತ್ತಾಳೆ. ಆದರೆ ಮಿಲನಾ... ನೀವೇ ನೋಡಿ ಈ ಚಿತ್ರದಲ್ಲಿ" ಎಂದು ಹೇಳಿದ್ದಾರೆ.

ಆದಿ-ನಿಧಿಮಾ ಜೋಡಿಯಾಗಿ ಪಾತ್ರವಹಿಸಿದ್ದ ಲವ್​ ಮಾಕ್​ಟೇಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಸಾಕಷ್ಟು ಸದ್ದು ಮಾಡಿಲ್ಲವಾದರೂ ಡಿಜಿಟಲ್ ಪ್ಲಾಟ್ ಫಾರಂಗಳಲ್ಲಿ ಬಹುಜನಪ್ರಿಯವಾಗಿತ್ತು.

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.