ಸಲಗ ಸಿನಿಮಾ ಸಂಗೀತದ ಕ್ರೆಡಿಟ್ ವಿಜಯ್ ಗೆ ಸಲ್ಲಬೇಕು: ಚರಣ್ ರಾಜ್
ಸಲಗ ಸಿನಿಮಾದ ಸಂಗೀತ ನಿರ್ದೇಶನದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೆರಡು ದಿನಗಳ ಹಿನ್ನೆಲೆ ಸಂಗೀತ ಕೆಲಸಗಳು ಬಾಕಿಯಿವೆ. ಕ್ಲೈಮ್ಯಾಕ್ಸ್ ಭಾಗದ ಕೆಲಸ ಬಾಕಿ ಉಳಿದಿದ್ದು, ರೆಕಾರ್ಡಿಂಗ್ ಗಾಗಿ ಲೈವ್ ರೆಕಾರ್ಡ್ ಮತ್ತು ಕೆಲ ಉಪಕರಣಗಳ ಅಗತ್ಯವಿದೆ.

ಸಲಗ ಸಿನಿಮಾದ ಸಂಗೀತ ನಿರ್ದೇಶನದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೆರಡು ದಿನಗಳ ಹಿನ್ನೆಲೆ ಸಂಗೀತ ಕೆಲಸಗಳು ಬಾಕಿಯಿವೆ. ಕ್ಲೈಮ್ಯಾಕ್ಸ್ ಭಾಗದ ಕೆಲಸ ಬಾಕಿ ಉಳಿದಿದ್ದು, ರೆಕಾರ್ಡಿಂಗ್ ಗಾಗಿ ಲೈವ್ ರೆಕಾರ್ಡ್ ಮತ್ತು ಕೆಲ ಉಪಕರಣಗಳ ಅಗತ್ಯವಿದೆ.
ಅದಕ್ಕಾಗಿ ಲಾಕ್ಡೌನ್ ಸಮ ಮುಗಿಯಲೆಂದು ತಾವು ಕಾಯುತ್ತಿರುವುದಾಗಿ ಸಂಗೀತ ನಿರ್ದೇಶಕ ಚರಣ್ ರಾಜ್ ಹೇಳಿದ್ದಾರೆ. ತಾವು ನೀಡಿರುವ ಸಂಗಿತದ ಎಲ್ಲಾ ಕ್ರೆಡಿಟ್ ಅನ್ನು ನಟ ನಿರ್ದೇಶಕ ದುನಿಯಾ ವಿಜಯ್ ಅವರಿಗೆ ನೀಡಿದ್ದಾರೆ,
ಸಲಗ ಸಾಹಸ ಪ್ರಧಾನ ಸಿನಿಮಾವಾಗಿದ್ದು, ಜಾನಪದ ಸಂಗೀತ ಬುಟಕಟ್ಟು ಮ್ಯೂಸಿಕ್ ಸಮ್ಮಿಳಿತವಾದ ಸಿದ್ದಿ ಮ್ಯೂಸಿಕ್ ನಲ್ಲಿದೆ ಎಂದು ಹೇಳಿದ್ದಾರೆ. ಈ ಪ್ಲಾನ್ ನನೆ ನೀಡಿದ್ದು, ವಿಜ್ ಅವರು ಈ ಎಲಿಮೆಂಟ್ ತರಲು ಅವರೇ ನನಗೆ ಐಡಿಯಾ ನೀಡಿದ್ದಾರೆ ಎಂದು ಚರಣ್ ತಿಳಿಸಿದ್ದಾರೆ.
ಜಾನಪದ ಥೀಮ್ ನನಗೆ ಹೊಸದು, ನಿರ್ದೇಶಕರಿಗೆ ಇದು ತಿಳಿದಿರುವುದರಿಂದ ನಾನು ಅವರಿಂದಲೇ ಕಲಿಯುತ್ತಿದ್ದೇನೆ,ನನಗೆ ಹೊಸದನ್ನು ಪ್ರಯತ್ನಿಸಲು ಅವಕಾಶ ಸಿಕ್ಕಿದೆ ಎಂದು ಚರಣ್ ರಾಜ್ ತಿಳಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸೂರಿ ಅಣ್ಣ ಹಾಡು ಯಶಸ್ಸು ಕಂಡಿದ್ದು. ಸಿದ್ದಿ ಥೀಮ್ ಸಾಂಗ್ ಅನ್ನು ಬುಡಕಟ್ಟು ಗಾಯಕರು ಹಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


