'ಅಮೃತ್ ಅಪಾರ್ಟ್ ಮೆಂಟ್ಸ್'ನಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಯೋಜಕರ ತಂಡ: ಗುರುರಾಜ್ ಕುಲಕರ್ಣಿ
ಅಮೃತ್ ಅಪಾರ್ಟ್ ಮೆಂಟ್ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಗೀತ ಸಂಯೋಜಕರಿರುವುದಕ್ಕೆ ಚಿತ್ರ ತಂಡ ಸಖತ್ ಎಕ್ಸೈಟ್ ಆಗಿದೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ಈ ಸಿನಿಮಾದಲ್ಲಿ ಲಾಕ್ ಡೌನ್ ಮೊದಲು 2 ಹಾಡುಗಳ ಚಿತ್ರೀಕರಣ ಮುಗಿಸಲಾಗಿದೆ.

ಅಮೃತ್ ಅಪಾರ್ಟ್ ಮೆಂಟ್ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಗೀತ ಸಂಯೋಜಕರಿರುವುದಕ್ಕೆ ಚಿತ್ರ ತಂಡ ಸಖತ್ ಎಕ್ಸೈಟ್ ಆಗಿದೆ. ಗುರುರಾಜ್ ಕುಲಕರ್ಣಿ ನಿರ್ದೇಶನದ ಈ ಸಿನಿಮಾದಲ್ಲಿ ಲಾಕ್ ಡೌನ್ ಮೊದಲು 2 ಹಾಡುಗಳ ಚಿತ್ರೀಕರಣ ಮುಗಿಸಲಾಗಿದೆ.
ಎಸ್ ಡಿ ಅರವಿಂದ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ನಾವು ಬಂದೇವಾ ಬೆಂಗಳೂರು ನೋಡಕ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದ ಹಿನ್ನೆಲೆ ಗಾಯಕ ತೇಜಸ್ ಹರಿದಾಸ್ ಕೂಡ ಹಾಡಿದ್ದಾರೆ.
ಒಂದು ಹಾಡು ಜಾನಪದ ಶೈಲಿಯಲ್ಲಿದ್ದು, ಮತ್ತೊಂದು ಹಾಡುಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವ ಎಂಬ ಗೀತೆಯಾಗಿದೆ.
ಗಂಡ ಮತ್ತು ಹೆಂಡತಿ ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ಗೀತೆ ಇದಾಗಿದೆ. ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದು, ವಾಣಿ ಹರಿಕೃಷ್ಣ ಮತ್ತು ಅಜಯ್ ವಾರಿಯರ್ ಹಿನ್ನೆಲೆ ಗಾಯನವಿದೆ.
ಸಿನಿಮಾಗೆ ಗುರುರಾಜ್ ಕುಲಕರ್ಣಿ ಕಥೆ ಚಿತ್ರಕಥೆ ಬರೆದಿದ್ದು, ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿರುವ ದಂಪತಿ ಕಥೆ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


