ಗಂಡುಮಗುವಿನ ತಾಯಿಯಾದ 'ದಿ ವಿಲನ್' ನಟಿ ಆ್ಯಮಿ ಜಾಕ್ಸನ್
ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ, ಅವರು ತಮ್ಮ ನವಜಾತ ಪುತ್ರ ಮತ್ತು ತಮ್ಮ ಭಾವೀ ಪತಿ ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ, ಅವರು ತಮ್ಮ ನವಜಾತ ಪುತ್ರ ಮತ್ತು ತಮ್ಮ ಭಾವೀ ಪತಿ ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ, ಆಮಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು, ಮಗುವನ್ನು ತನ್ನ ತೋಳುಗಳಲ್ಲಿಅಪ್ಪಿಕೊಂಡಿದ್ದರೆ ಜಾರ್ಜ್, ಅವಳ ಹಣೆಯ ಮೇಲೆ ಕಿಸ್ ಮಾಡುತ್ತಿದ್ದಾರೆ.
ತಮ್ಮ ವಿಶೇಷ ಕ್ಷಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಆ್ಯಮಿ "Our Angel, welcome to the world Andreas." ಎಂದು ಬರೆದುಕೊಂಡಿದ್ದಾರೆ.
2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಬ್ರಿಟೀಷ್ ಮದರ್ಸ್ ಡೇ ದಿನ ತಾವು ತಾಯಿಯಾಗುತ್ತಿರುವುದಾಗಿ ಘೋಷಿಸಿಕೊಂಡಿದ್ದರು.ಗರ್ಭಿಣಿ ಆ್ಯಮಿ ತಮ್ಮ ಗೆಳೆಯ ಜಾರ್ಕ್ಜ್ ಜತೆಗೆ ಮೇ 5ರಂದು ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮುಂದಿನ ವರ್ಷಾರಂಬಕ್ಕೆ ಇಬ್ಬರೂ ವಿವಾಹವಾಗುವುದಾಗಿ ಹೇಳಿಕೊಂಡಿದ್ದರು.
ಆ್ಯಮಿ ಕನ್ನಡ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದು ಶಿವರಾಜ್ ಕುಮಾರ್, ಸುದೀಪ್ ಅಭಿಮಯದ "ದಿ ವಿಲನ್" ನಲ್ಲಿ ಪ್ರಮುಖ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರೆಂದು ನಾವಿಲ್ಲಿ ನೆನೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


