ಸಿನಿಮಾ ಸುದ್ದಿ

ದೇಹದ ತೂಕ ಇಳಿಸಿ‘ಮಾತು ಕಳೆದುಕೊಂಡ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ!

ಪ್ರಯೋಗಾತ್ಮಕ ಚಿತ್ರ 'ಸೈಜ್​ ಝೀರೊ'ದಲ್ಲಿಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ಆ ಬಳಿಕ ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು

ದೇಹದ ತೂಕ ಇಳಿಸಿ‘ಮಾತು ಕಳೆದುಕೊಂಡ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ!
ಅನುಷ್ಕಾ ಶೆಟ್ಟಿ
Published On :

ಹೈದರಾಬಾದ್/ಬೆಂಗಳೂರು: ಪ್ರಯೋಗಾತ್ಮಕ ಚಿತ್ರ 'ಸೈಜ್​ ಝೀರೊ'ದಲ್ಲಿಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್​ ಸ್ವೀಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ಆ ಬಳಿಕ  ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್​ಗಳನ್ನು ಕಳೆದುಕೊಂಡಿದ್ದರು.ಹೀಗಾಗಿ ದೇಹದ ತೂಕ ಇಳಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟಿದ್ದರಾದರೂ,ಯಾವುದೂ ಫಲ ನೀಡಲಿಲ್ಲ.

 ಕಡೆಗೆ'ಬಾಹುಬಲಿ' ಸಿನಿಮಾಗಾಗಿ ಹೇಳುಕೊಳ್ಳುವಷ್ಟು ಅಲ್ಲವಾದರೂ, ತಕ್ಕಮಟ್ಟಿಗೆ ತೆಳ್ಳಗಾಗಿದ್ದರು. ನಂತರ'ಭಾಗಮತಿ'ಸಿನಿಮಾದಲ್ಲೂ ಅವರು ಕೊಂಚ ದಪ್ಪವಾಗಿಯೇ ಕಾಣುತ್ತಿದ್ದರು.ಇದಾದ ನಂತರ ಅವರಿಗೆ ಯಾವುದೇ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿರಲಿಲ್ಲ.

ಇದರಿಂದ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಂಡು,ಭಾರತಕ್ಕೆ ಮರಳುವ ಮುನ್ನವೇ ಅವರಿಗೆಹಾಲಿವುಡ್​ ​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು.ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು.ಆದರೆ ಈಗ ಬಂದಿರುವ ಹೊಸ ಸುದ್ದಿ ಏನು ಗೊತ್ತಾ? ಅನುಷ್ಕಾ‘ಮಾತನಾಡದ ಸ್ಥಿತಿ ತಲುಪಿದ್ದಾರಂತೆ’
  
ಆಘಾತಕ್ಕೆ ಒಳಗಾಗಬೇಡಿ, ಅನುಷ್ಕಾ ದೇಹದ ತೂಕ ಇಳಿಸಿಕೊಳ್ಳದೆ ಹೋಗಿದ್ದರೆ, ಹೊಸ ಸಿನಿಮಾದ ‘ಸೈಲೆನ್ಸ್’ ನಲ್ಲಿ ಮಾತು ಬಾರದ ಪಾತ್ರ ಅವರಿಗೆ ಸಿಗುತ್ತಿರಲಿಲ್ಲ.ಐದು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸಲಿದ್ದು, ಮಾತು ಬಾರದ ಕಲಾವಿದೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಹೆಸರು ಸಾಕ್ಷಿ.
 
 ‘ಸೈಲೆನ್ಸ್’ ಚಿತ್ರದಲ್ಲಿ ಆರ್​ ಮಾಧವನ್​, ಅಂಜಲಿ, ಶಾಲಿನಿ ಪಾಂಡೆ, ಸುಬ್ಬರಾಜು ಹಾಗೂ ಮೈಕೆಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಂಗ್ಲ​, ಹಿಂದಿ​, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿಯೂ ಚಿತ್ರ ತೆರೆ ಕಾಣಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.