'ಮಜಾ ಟಾಕೀಸ್' ಶ್ವೇತಾ ಚಂಗಪ್ಪ 'ಬೇಬಿ ಬಂಪ್' ಫೋಟೋಗೆ ಅಭಿಮಾನಿಯಿಂದ ಅಸಭ್ಯ ಕಮೆಂಟ್, ಮನನೊಂದ ನಟಿ!
ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಜಂಗಪ್ಪ ಅವರು ತಮ್ಮ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿಯ ಹಂಚಿಕೊಂಡಿದ್ದರು. ಆದರೆ ಅಭಿಮಾನಿಯೊಬ್ಬ ಮಾಡಿದ್ದ ಕಮೆಂಟ್ ನಟಿಯ ಮನಸ್ಸು ನೋಯುವಂತೆ ಮಾಡಿದೆ.

ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಜಂಗಪ್ಪ ಅವರು ತಮ್ಮ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಖುಷಿಯ ಹಂಚಿಕೊಂಡಿದ್ದರು. ಆದರೆ ಅಭಿಮಾನಿಯೊಬ್ಬ ಮಾಡಿದ್ದ ಕಮೆಂಟ್ ನಟಿಯ ಮನಸ್ಸು ನೋಯುವಂತೆ ಮಾಡಿದೆ.
ಶ್ವೇತಾ ಚಂಗಪ್ಪ ಅವರು ಇತ್ತೀಚೆಗೆ ಕೊಡಗು ಶೈಲಿಯ ಉಡುಪಿನಲ್ಲಿ ಫೋಟೋಶೂಟ್ ಮಾಡಿಸಿ ಅದನ್ನು ಇನ್ ಸ್ಟಾಗ್ರಾಂಗೆ ಪೋಸ್ಟ್ ಮಾಡಿದ್ದರು. ಈ ಫೋಟೋವನ್ನು ನೋಡಿದ ಅಭಿಮಾನಿಯೊಬ್ಬ ಕೊನೆಗೂ ಸೃಜನ್ ಲೋಕೇಶ್ ತಂದೆಯಾಗುತ್ತೀದ್ದೀರಾ ಅಭಿನಂದನೆಗಳು, ಮಜಾ ಟಾಕೀಸ್ ಗೆ ಹೊಸ ಎಂಟ್ರಿ ಎಂದು ಕಮೆಂಟ್ ಮಾಡಿದ್ದನು.
ಇನ್ ಸ್ಟಾಗ್ರಾಂನ ಕಿಂಗ್ ಆಫ್ ಶೆಟ್ಟಿ ಎಂಬಾತ ಈ ರೀತಿ ಕಮೆಂಟ್ ಮಾಡಿದ್ದು ಇದನ್ನು ನೋಡಿದ ಶ್ವೇತಾ ಚಂಗಪ್ಪ ನೀವು ಸೃಜನ್ ಲೋಕೇಶ್ ಗೆ ಅಭಿನಂದನೆಯನ್ನು ಯಾಕೆ ಹೇಳುತ್ತೀರಿ. ನಾನು ನನ್ನ ವೈಯಕ್ತಿಕ ಫೋಟೋವನ್ನು ಪೋಸ್ಟ್ ಮಾಡಿದ್ದೀನಿ. ನೀವು ತಮಾಷೆ ಎಂದುಕೊಂಡಿದ್ದೀರಾ. ಮೊದಲು ವೈಯಕ್ತಿಕ ಮತ್ತು ವೃತ್ತಿಪರ ವಿಚಾರಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನೀವು ಸೂಕ್ಷ್ಮತೆಯನ್ನು ಹೊಂದಬೇಕು ಎಂದು ಅಭಿಮಾನಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಇನ್ನು ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಶ್ವೇತಾ ಚಂಗಪ್ಪ ಅವರು ರಾಣಿ ಪಾತ್ರದಲ್ಲಿ ಸೃಜನ್ ಲೋಕೇಶ್ ಅವರ ಪತ್ನಿಯಾಗಿ ಅಭಿನಯಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


