ಮತ್ತೊಂದು 'ಹಾರರ್' ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯ!
ಹೆಚ್. ಲೋಹಿತ್ ನಿರ್ದೇಶನದ 'ದೇವಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಸ್ವಲ್ಪ ಬಿಡುವಿನ ಬಳಿಕ ಮುಂದಿನ ಚಿತ್ರಗಳನ್ನು ಅಂತಿಮಗೊಳಿಸಿದ್ದಾರೆ. ಧೀರ್ಘವಾಗಿ ಯೋಚಿಸಿ ಎರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಬೆಂಗಳೂರು: ಹೆಚ್. ಲೋಹಿತ್ ನಿರ್ದೇಶನದ 'ದೇವಕಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಉಪೇಂದ್ರ, ಸ್ವಲ್ಪ ಬಿಡುವಿನ ಬಳಿಕ ಮುಂದಿನ ಚಿತ್ರಗಳನ್ನು ಅಂತಿಮಗೊಳಿಸಿದ್ದಾರೆ. ಧೀರ್ಘವಾಗಿ ಯೋಚಿಸಿ ಎರಡು ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ತಮಿಳಿನ 7 ನಾಟ್ಕಲ್ ಸಿನಿಮಾ ನಿರ್ದೇಶಿಸಿದ ಗೌತಮ್ ವಿ. ಪಿ. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶಕ್ತಿ ಪಿ ವಾಸು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶಕ ಪಿ. ವಾಸು ಸಹೋದರ ಪಿ. ವಿಮಲ್ , ಗೌತಮ್ ನಿರ್ದೇಶನದ ಕನ್ನಡ ಚಿತ್ರಕ್ಕೆ ಕಥೆ ಬರೆಯಲಿದ್ದಾರೆ.
ಹಾರರ್ ಕಥೆಯಾಧಾರಿತ ಇದು ಬಿಗ್ ಬಜೆಟ್ ಚಿತ್ರವಾಗಿದ್ದು, ಇದರಲ್ಲಿ ಸಾಕಷ್ಟು ಗ್ರಾಫಿಕ್ಸ್ ಕೆಲಸವಿರುತ್ತದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಪ್ರೊಢಕ್ಷನ್ ಹೌಸ್, ಚಿತ್ರ ತಂಡ ಎಲ್ಲ ಬಗ್ಗೆ ನವೆಂಬರ್ ಮೊದಲ ವಾರದಲ್ಲಿ ಅಧಿಕೃತ ಮಾಹಿತಿ ಹೊರಬೀಳಲಿದೆ. ಪ್ರಿಯಾಂಕಾ ಉಪೇಂದ್ರ ಅವರ ಜನ್ಮ ದಿನ ನವೆಂಬರ್ 9 ರಂದು ಪಸ್ಟ್ ಲುಕ್ ಬಿಡುಗಡೆಯಾಗಲಿದೆ. ಈ ಮಧ್ಯೆ ಉಳಿದ ತಂಡವನ್ನು ಅಂತಿಮಗೊಳಿಸಲಾಗುತ್ತಿದೆ.
ಗೌತಮ್ ಚಿತ್ರ ಹೊರತುಪಡಿಸಿದಂತೆ ಹೊಸ ತಂಡದೊಂದಿಗೆ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ. ಖಾಕಿದಾರಿ ಅವತಾರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಕೆಲವೊಂದು ಆಕ್ಷನ್ ದೃಷ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


