ಸಿನಿಮಾ ಸುದ್ದಿ

ಮತ್ತೆ ಸಿನಿರಂಗಕ್ಕೆ ಕ್ರೇಜಿ ಕ್ವೀನ್ ರಕ್ಷಿತಾ ಎಂಟ್ರಿ!

ಸ್ಯಾಂಡಲ್'ವುಡ್'ನಲ್ಲಿ ಸುಂಟರಗಾಳಿ ಎಬ್ಬಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಕ್ರೇಜಿಕ್ವೀನ್ ರಕ್ಷಿತಾ ಅವರು ಇದೀಗ ಮತ್ತೆ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ.

ಮತ್ತೆ ಸಿನಿರಂಗಕ್ಕೆ ಕ್ರೇಜಿ ಕ್ವೀನ್ ರಕ್ಷಿತಾ ಎಂಟ್ರಿ!
ಕ್ರೇಜಿ ಕ್ವೀನ್ ರಕ್ಷಿತಾ
Published On :

ಸ್ಯಾಂಡಲ್'ವುಡ್'ನಲ್ಲಿ ಸುಂಟರಗಾಳಿ ಎಬ್ಬಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಕ್ರೇಜಿಕ್ವೀನ್ ರಕ್ಷಿತಾ ಅವರು ಇದೀಗ ಮತ್ತೆ ಸಿನಿರಂಗಕ್ಕೆ ಕಾಲಿಡುತ್ತಿದ್ದಾರೆ. 

ಪುನೀತ್ ರಾಜ್ ಕುಮಾರ್ ಅಭಿನಯದ ಅಪ್ಪು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಕ್ಷಿತಾ ಅವರು ತೆಲುಗು ಖ್ಯಾತ ನಟ, ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ಜ್ಯೂನಿಯರ್ ಎನ್'ಟಿಆರ್ ಸೇರಿ ಹಲವು ನಟರ ಜೊತೆ ನಟಿಸಿ, ಜನರ ಮನಗೆದ್ದಿದ್ದರು. ನಿರ್ದೇಶಕ ಪ್ರೇಮ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ದೂರ ಉಳಿಸಿದ್ದರು. ಆದರೂ ಪ್ರೇಕ್ಷಕರಿಂದ ದೂರವಾಗದೇ, ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. 

ಇದೀಗ ತಮ್ಮ ಸಹೋದರ ರಣಾ ಅಭಿನಯದ, ಪ್ರೇಮ್ ನಿರ್ದೇಶನದ ಚಿತ್ರ 'ಏಕ್ ಲವ್ ಯಾ' ಚಿತ್ರದಲ್ಲಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ರಕ್ಷಿತ, ಚಿತ್ರದ ಹಾಡೊಂದರಲ್ಲಿ ಅಭಿನಯಿಸುತ್ತಿದ್ದಾರೆ. ನಟಿ ರಚಿತಾ ರಾಮ್ ಜೊತೆಗೆ ರಕ್ಷಿತಾ ಹೆಜ್ಜೆ ಹಾಕುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.