ಸಿನಿಮಾ ಸುದ್ದಿ

ಶಿವಣ್ಣನ ಮುಂದಿನ ಚಿತ್ರದಲ್ಲಿ ಶಿವಾಜಿ ಪ್ರಭು,, ಸುಹಾಸಿನಿ

ಹ್ಯಾಟ್ರಿಕ್ ಹೀರೋ ಶಿವಣ್ಣನ ಮುಂದಿನ ಚಿತ್ರ "ಆನಂದ್" ನಲ್ಲಿ ಹಿರಿಯ ನಟರಾದ ಶಿವಾಜಿ ಪ್ರಭು ಹಾಗೂ ಸುಹಾಸಿನಿ ಅಭಿನಯಿಸುವುದು ಪಕ್ಕಾ ಆಗಿದೆ.

ಶಿವಣ್ಣನ ಮುಂದಿನ ಚಿತ್ರದಲ್ಲಿ ಶಿವಾಜಿ ಪ್ರಭು,, ಸುಹಾಸಿನಿ
ಶಿವಣ್ಣನ ಮುಂದಿನ ಚಿತ್ರದಲ್ಲಿ ಶಿವಾಜಿ ಪ್ರಭು,, ಸುಹಾಸಿನಿ
Published On :
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವಣ್ಣನ ಮುಂದಿನ ಚಿತ್ರ "ಆನಂದ್" ನಲ್ಲಿ ಹಿರಿಯ ನಟರಾದ ಶಿವಾಜಿ ಪ್ರಭು ಹಾಗೂ ಸುಹಾಸಿನಿ ಅಭಿನಯಿಸುವುದು ಪಕ್ಕಾ ಆಗಿದೆ. ಪಿ. ವಾಸು ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ-ನಟಿಗೆ ಯಾವ ಪಾತ್ರ ನೀಡಲಾಗುತ್ತದೆ ಎನ್ನುವುದನ್ನು ನಿರ್ದೇಶಕ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಮುಖ್ಯ ಪಾತ್ರಗಳಲ್ಲಿ ಈ ಇಬ್ಬರೂ ಅಭಿನಯಿಸಲಿದ್ದಾರೀಂದಷ್ಟೇ ಹೇಳಿದ್ದಾರೆ. ಇನ್ನೂ ಸುಹಾಸಿನಿ ಹಾಗೂ ಶಿವಾಜಿ ಅವರುಗಳು ಇದಾಗಲೇ ಚಿತ್ರದ ಆಯ್ದ ಭಾಗದ ಶೂಟಿಂಗ್ ಮುಗಿಸಿದ್ದಾರೆ.
ದ್ವಾರಕಿಶ್ ಪ್ರೊಡಕ್ಷನ್ ನ 52ನೇ ಚಿತ್ರವಾಗಿರುವ "ಆನಂದ್" ಗಾಗಿ ಇದಾಗಲೇ ಎಪ್ಪತ್ತು ದಿನಗಳ ಶೂಟಿಂಗ್ ಮುಗಿದಿದೆ.ಇನ್ನು ಮೇ 30ರಿಂದ ಮಂಗಲೂರಿನಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಒಂದು ಹಾಡಿನ ಚಿತ್ರೀಕರಣ ನಡೆಸಲಾಗುತ್ತದೆ.ಒಂದು ಫೈಟಿಂಗ್ ದೃಶ್ಯವಿದ್ದು ಇದನ್ನು ಮಡಿಕೇರಿಯಲ್ಲಿ ಶೂಟ್ ಮಾಡಿದರೆ ರೈಲಿನ ಸೀಕ್ವೆನ್ಸ್ ದೃಶ್ಯಗಳನ್ನು ಹೈದರಾಬಾದ್ ನಲ್ಲಿ ಸೆರೆಹಿಡಿಯಲಾಗುವುದು ಎಂದು ಚಿತ್ರತಂಡದ ಮೂಲಗಳು ಹೇಳಿದೆ.
ಚಿತ್ರಕ್ಕಾಗಿ ಹೊರಾಂಗಣದಲ್ಲಿ ಚಿತ್ರೀಕರಿಸಬೇಕಾಗಿರುವ ಹಾಡೊಂದರ ಶುಟಿಂಗ್ ಬಾಕಿ ಇದ್ದು ಇದಕ್ಕಾಗಿ ಸೂಕ್ತ ಸ್ಥಳದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ."ಶಿವಲಿಂಗ" ನಂತರ ವಾಸು-ಶಿವಣ್ಣ ಜೋಡಿಯ ಎರಡನೇ ಚಿತ್ರವಾಗಿರುವ "ಆನಂದ್" ನಲ್ಲಿ ರಚಿತಾ ರಾಮ್ ಹಾಗೂ ನಿಧಿ ಸುಬ್ಬಯ್ಯ ಪ್ರಮುಖ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದ್ದು ಪಿಕೆಎಚ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.