ಬೆಂಗಳೂರು: ಮನೆ ಬಾಡಿಗೆ ಕೊಡದ ನಟ ಆದಿತ್ಯ ವಿರುದ್ಧ ದೂರು ದಾಖಲು
ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ಕೊಡದೆ ಮಾಲೀಕರಿಗೆ ಸತಾಯಿಸುತ್ತಿದ್ದ ಸ್ಯಾಂಡಲ್ವುಡ್ ನಟ ಆದಿತ್ಯ ವಿರುದ್ಧ ಸದಾಶಿವನಗರ ಪೊಲೀಸ್

Published On :
ಬೆಂಗಳೂರು: ಕಳೆದ ಏಳು ತಿಂಗಳಿಂದ ಮನೆ ಬಾಡಿಗೆ ಕೊಡದೆ ಮಾಲೀಕರಿಗೆ ಸತಾಯಿಸುತ್ತಿದ್ದ ಸ್ಯಾಂಡಲ್ವುಡ್ ನಟ ಆದಿತ್ಯ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಟ ಆದಿತ್ಯ ಅವರು ಸದಾಶಿವನಗರದ ಆರ್ಎಂವಿ ಎಕ್ಷಟೆನ್ಷನ್ನಲ್ಲಿರುವ ಪ್ರಸನ್ನ ಅವರ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಆದರೆ ಕಳೆದ ಏಳು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದಕ್ಕೆ ಮನೆ ಮಾಲೀಕರಾದ ಪ್ರಸನ್ನ ಜೊತೆ ಜಗಳವಾಡಿದ್ದಾರೆ.
ಬಾಡಿಗೆ ಮನೆಯಲ್ಲಿ ಆದಿತ್ಯ ಅವರ ಜೊತೆ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ತಂಗಿ ರಿಷಿಕಾ ಹಾಗೂ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ತಿಂಗಳಿಗೆ 40 ಸಾವಿರ ರೂ. ನಂತೆ ಬಾಡಿಗೆಗೆ ನೀಡಲಾಗಿತ್ತು. ಈಗ ಮನೆ ಮಾಲೀಕರು ಬಾಡಿಗೆಯನ್ನು 48 ಸಾವಿರ ರೂಪಾಯಿಗೆ ಏರಿಸಿದ್ದಾರೆ. ಆದಿತ್ಯ ಅವರು ಇದುವರೆಗೆ 2 ಲಕ್ಷ 88 ಸಾವಿರ ಬಾಡಿಗೆ ಬಾಕಿ ಉಳಿಸಿಕೊಂಡಿದ್ದು, ಹಣ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮಾಲೀಕ ದೂರಿದ್ದಾರೆ.
ಮಾಲೀಕ ಪ್ರಸನ್ನ ಅವರು ಈ ವಿಚಾರವಾಗಿ ಕಳೆದ ನವೆಂಬರ್ ನಲ್ಲಿ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಎವಿಕ್ಷನ್ ಕೇಸ್ ದಾಖಲಿಸಿದ್ದರು. ಇಂದು ಮನೆ ಖಾಲಿ ಮಾಡಿಸಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


