ಸಿನಿಮಾ ಸುದ್ದಿ

ದಿಗಂತ್ ಜೊತೆ 'ಹುಟ್ಟುಹಬ್ಬದ ಶುಭಾಶಯಗಳು' ಹೇಳಲು ಬರುತ್ತಿದ್ದಾರೆ ಕವಿತಾ ಗೌಡ

ಕಿರುತೆರೆ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ನಟಿ ಕವಿತಾ ಗೌಡ ಈಗ ಬೆಳ್ಳಿಪರದೆ ಮೇಲೆ ಮಿಂಚಲು ಅಣಿಯಾಗುತ್ತಿದ್ದಾರೆ....

ದಿಗಂತ್ ಜೊತೆ 'ಹುಟ್ಟುಹಬ್ಬದ ಶುಭಾಶಯಗಳು' ಹೇಳಲು ಬರುತ್ತಿದ್ದಾರೆ ಕವಿತಾ ಗೌಡ
ಕವಿತಾ ಗೌಡ
Published On :
ಕಿರುತೆರೆ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದ ನಟಿ ಕವಿತಾ ಗೌಡ ಈಗ ಬೆಳ್ಳಿಪರದೆ ಮೇಲೆ ಮಿಂಚಲು ಅಣಿಯಾಗುತ್ತಿದ್ದಾರೆ.
ರಿಯಾಲಿಟಿ ಶೋನಲ್ಲಿ ಭಾಗಿಯಾಗಿ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವ ಕವಿತಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕವಿತಾ 'ಹುಟ್ಟುಹಬ್ಬದ ಶುಭಾಶಯಗಳು' ಹೇಳಲು ಬರ್ತಿದ್ದಾರೆ.
ದೂದ್ ಪೇಡ ದಿಗಂತ್ ಅಭಿನಯದ ಹೊಸ ಸಿನಿಮಾ 'ಹುಟ್ಟುಹಬ್ಬದ ಶುಭಾಶಯಗಳು' ಚಿತ್ರಕ್ಕೆ ಕವಿತಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಮೊದಲ ಬಾರಿಗೆ ಕವಿತಾ ದಿಗಂತ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. 
'ಹುಟ್ಟುಹಬ್ಬದ ಶುಭಾಶಯಗಳು' ಕವಿತಾ ಅವರ ಎರಡನೆ ಸಿನಿಮಾ ಆಗಿದೆ. ಈ ಚಿತ್ರವನ್ನು ಯುವ ನಿರ್ದೇಶಕ ನಾಗರಾಜ್ ಬೇತೂರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ 'ಚಮಕ್' ಮತ್ತು 'ಅಯೋಗ್ಯ' ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.