ಅಪರಾಧ, ದ್ವೇಷ ಮತ್ತು ಕತ್ತಲೆ ಜಗತ್ತನ್ನು ಅನ್ವೇಷಿಸುವುದಕ್ಕೆ ಇಷ್ಟಪಡುತ್ತೇನೆ: ಸಂಯುಕ್ತ ಹೊರನಾಡು
ತಮ್ಮ ಪಾತ್ರಗಳ ಕುರಿತು ನಟಿ ಸಂಯುಕ್ತ ಹೊರನಾಡು ಹೆಚ್ಚು ರಹಸ್ಯವನ್ನು ಕಾಪಾಡಿಕೊಂಡು ಬರುತ್ತಾರೆ. ಇನ್ನು ತಮ್ಮ ಅಭಿನಯದ ತ್ರಾಯ ಚಿತ್ರದ ಕುರಿತಂತೆ ಮಾತನಾಡಿರುವ...

Published On :
ತಮ್ಮ ಪಾತ್ರಗಳ ಕುರಿತು ನಟಿ ಸಂಯುಕ್ತ ಹೊರನಾಡು ಹೆಚ್ಚು ರಹಸ್ಯವನ್ನು ಕಾಪಾಡಿಕೊಂಡು ಬರುತ್ತಾರೆ. ಇನ್ನು ತಮ್ಮ ಅಭಿನಯದ ತ್ರಾಯ ಚಿತ್ರದ ಕುರಿತಂತೆ ಮಾತನಾಡಿರುವ ಅವರು ನನಗೆ ಅಪರಾಧ, ದ್ವೇಷ ಮತ್ತು ಕತ್ತಲೆ ಜಗತ್ತನ್ನು ಅನ್ವೇಷಿಸುವುದೆಂದರೆ ಇಷ್ಟ ಎಂದು ಹೇಳಿದ್ದಾರೆ.
ತ್ರಯದಲ್ಲಿನ ನನ್ನ ಪಾತ್ರ ಮೂವರು ಹುಡುಗರ ಜೊತೆ ಸಾಗುತ್ತದೆ. ರಾತ್ರಿ ವಿನೋದ ಹೊಂದಲು ಹೋಗಿ ಮೂವರು ಹುಡುಗರು ತಪ್ಪು ಮಾಡುತ್ತಾರೆ. ಅದನ್ನು ಪತ್ತೆ ಹಚ್ಚು ಕೆಲಸ, ತ್ರಾಯ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನಿರ್ದೇಶಕರ ಒನ್ ಲೈನ್ ಸ್ಟೋರಿ ಕೇಳಿ ನನಗೆ ಥ್ರಿಲ್ ಆಗಿತ್ತು ಎಂದು ಸಂಯುಕ್ತ ಹೊರನಾಡು ಹೇಳಿದ್ದಾರೆ.
ಋಣಾತ್ಮಕ ಪಾತ್ರಗಳಲ್ಲಿ ಅಭಿನಯಿಸುವುದು ಎಂದರೇ ನನಗೆ ಇಷ್ಟ. ಇನ್ನು ನನಗೆ ಸಿಕ್ಕಿರುವ ಕೆಲ ಚಿತ್ರಗಳು ಸಹ ಅದೇ ಜಾಡಿ ಬರುವುದರಿಂದ ನಾನು ಹೆಚ್ಚು ಆಸಕ್ತಳಾಗಿದ್ದೇನೆ ಎಂದರು. ಇನ್ನು ತ್ರಯ ಚಿತ್ರವನ್ನು ಕೃಷ್ಣ ಸಾಯಿ ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಕೌಶಲ್ ಮಹಾಜನ್ ಮತ್ತು ರಾಜ್ ಆನಂದ್ ಬಂಡವಾಳ ಹೂಡಿದ್ದಾರೆ.
ಸಂಯುಕ್ತ ಹೊರನಾಡು ಅವರ ಅರಿಷಡ್ವರ್ಗ, ಮೈಸೂರ್ ಮಸಾಲಾ, ನಾನು ಮತ್ತು ಗುಂಡ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


