ಮುನಿರತ್ನ 'ಕುರುಕ್ಷೇತ್ರ' ಭವಿಷ್ಯ ಚುನಾವಣಾ ಆಯೋಗ ಕೈಯಲ್ಲಿ!
ದರ್ಶನ್ ತೂಗುದೀಪ ಅಭಿನಯದ, ಮುನಿರತ್ನ ನಿರ್ಮಾಣದ ಬಹು ನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಚಿತ್ರ ...

Published On :
ದರ್ಶನ್ ತೂಗುದೀಪ ಅಭಿನಯದ, ಮುನಿರತ್ನ ನಿರ್ಮಾಣದ ಬಹು ನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಇರುವುದು ಬೇರೆ ಚಿತ್ರಗಳ ಸಮಸ್ಯೆಯಲ್ಲ, ಬದಲಿಗೆ ಲೋಕಸಭೆ ಚುನಾವಣೆ. ಏಪ್ರಿಲ್ 5ರಂದು ಚಿತ್ರ ಬಿಡುಗಡೆ ಮಾಡಬೇಕೆಂದು ನಿರ್ಮಾಪಕ ಮುನಿರತ್ನ ಅಂದುಕೊಂಡಿದ್ದರು. ಇದೀಗ ಚಿತ್ರ ಬಿಡುಗಡೆ ಮಾಡಬೇಕಾದರೆ ಅವರಿಗೆ ಚುನಾವಣಾ ಆಯೋಗದ ಅನುಮತಿ ಸಿಗಬೇಕು.
ಇದರ ಹಿಂದಿನ ಮುಖ್ಯ ಕಾರಣ ಸಿನಿಮಾದಲ್ಲಿ ಸಿಎಂ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯಸಿರುವುದು. ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಅಭ್ಯರ್ಥಿಗಳನ್ನು ಯಾವ ರೀತಿಯಲ್ಲಾದರೂ ಪ್ರಚಾರಕ್ಕೆ ಬಳಸಿಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆಯಾಗಿರುತ್ತದೆ.
ಕಳೆದ ವರ್ಷ ಏಪ್ರಿಲ್ ನಲ್ಲಿಯೇ ಕುರುಕ್ಷೇತ್ರ ಬಿಡುಗಡೆಯಾಗಬೇಕಿತ್ತು. ಕಳೆದ ವರ್ಷ ವಿಧಾನಸಭೆ ಚುನಾವಣೆ, ನಂತರ ಸಿನಿಮಾ ಗ್ರಾಫಿಕ್ಸ್ ಕೆಲಸ ಎಂದು ಬಿಡುಗಡೆಗೆ ವಿಳಂಬವಾಗಿತ್ತು. ಈ ಬಾರಿ ಯುಗಾದಿ ಹೊತ್ತಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದರು ಮುನಿರತ್ನ ಅವರು. ಈ ಮಧ್ಯೆ ದೊಡ್ಡದಾಗಿ ಆಡಿಯೊ ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಕೂಡ ಇದೇ ತಿಂಗಳು ಹಮ್ಮಿಕೊಂಡಿದ್ದರು. ಅದೀಗ ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕಿದರೆ ಮಾತ್ರ ಕಾರ್ಯಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


