ಸಿನಿಮಾ ಸುದ್ದಿ

'ಅವತಾರ ಪುರುಷ'ನಿಗಾಗಿ ಆಯುರ್ವೇದ ಪಂಡಿತನಾದ ಸಾಯಿಕುಮಾರ್!

ಸ್ಯಾಂಡಲ್ ವುಡ್ ಡೈಲಾಗ್ ಕಿಂಗ್ ಸಾಯಿ ಕುಮಾರ್ ತಮ್ಮ ಮುಂದಿನ ಚಿತ್ರದಲ್ಲಿ ಆಯುರ್ವೇದ ವೈದ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಅವತಾರ ಪುರುಷ" ಚಿತ್ರದಲ್ಲಿ ಅವರು ಈ ವಿಭಿನ್ನ ಗೆಟಪ್ ನಲ್ಲಿ ಕಾಣಿಸುತ್ತಿದ್ದಾರೆ.

'ಅವತಾರ ಪುರುಷ'ನಿಗಾಗಿ ಆಯುರ್ವೇದ ಪಂಡಿತನಾದ ಸಾಯಿಕುಮಾರ್!
ಸಾಯಿಕುಮಾರ್
Published On :
ಸ್ಯಾಂಡಲ್ ವುಡ್ ಡೈಲಾಗ್ ಕಿಂಗ್ ಸಾಯಿ ಕುಮಾರ್ ತಮ್ಮ  ಮುಂದಿನ ಚಿತ್ರದಲ್ಲಿ ಆಯುರ್ವೇದ ವೈದ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಅವತಾರ ಪುರುಷ" ಚಿತ್ರದಲ್ಲಿ ಅವರು ಈ ವಿಭಿನ್ನ ಗೆಟಪ್ ನಲ್ಲಿ ಕಾಣಿಸುತ್ತಿದ್ದಾರೆ.
ಸಾಯಿಕುಮಾರ್ ಜನ್ಮದಿನದಂದು ಚಿತ್ರತಂಡ ಬಿಡುಗಡೆಗೊಳಿಸಿರುವ ಅವರ ಸ್ಟಿಲ್ ನಲ್ಲಿ 'ರಾಮು ಜೋಯಿಸ್ರು'  ಎಂಬ ಆಯುರ್ವೇದ ಪಂಡಿತನಾಗಿ ನಟ ಅಭಿನಯಿಸಿರುವುದನ್ನು ಕಾಣಬಹುದಾಗಿದೆ.
ಶರಣ್ ನಾಯಕನಾಗಿರುವ ಈ ಚಿತ್ರವನ್ನು ಪುಷ್ಕರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ  ನಿರ್ಮಿಸಲಾಗುತ್ತಿದೆ.ನಿರ್ದೇಶಕರ ಪ್ರಕಾರ, ಆಯುರ್ವೇದ ವೈದ್ಯನಾಗಿ ಸಾಯಿಕುಮಾರ್ ಪಾತ್ರ ಯುವಕ ಹಾಗೂ ವೃದ್ದ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಲಲಿದೆ.
"ಆಯುರ್ವೇದ ಪಂಡಿತರು ಸಾಂಪ್ರದಾಯಿಕ ಜೀವನ ಶೈಲಿಯನ್ನು ಅನುಸರಿಸುತ್ತಾರೆ, ಮತ್ತು ಅವರಿಗಿಂತ ಕಿರಿಯನಾಗಿರುವ ನಾಯಕ ಶರಣ್ ಕಥಾ ಜೀವನದಲ್ಲಿ ಈ ವೈದ್ಯನ ಪಾತ್ರ ಮುಖ್ಯವಾಗಿರುತ್ತದೆ" ನಿರ್ದೇಶಕರು ಹೇಳಿದ್ದಾರೆ.
ಚಿತ್ರದ ಶೀರ್ಷಿಕೆ ಹಾಲಿವುಡ್ ನ ಬ್ಲಾಕ್ ಬಸ್ಟರ್ "ಅವತಾರ್" ನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿದ್ದು ಶ್ರೀನಗರ ಕಿಟ್ಟಿಬ್ಲ್ಯಾಕ್ ಮ್ಯಾಜಿಕ್ ಮಾಡುವವನ ಪಾತ್ರದಲ್ಲಿದ್ದಾರೆ.ಅಲ್ಲದೆ ಹಿರಿಯ ನಟಿ  ಭವ್ಯ ಮತ್ತು ಸುಧಾರಾಣಿ ಸಹ ಇದರಲ್ಲಿದ್ದಾರೆ.ಚರಣ್ ರಾಜ್ ಸಂಗೀತ ಮತ್ತು ವಿಲಿಯಂ ಡೇವಿಡ್ ಕ್ಯಾಮರಾ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.