ಸಿನಿಮಾ ಸುದ್ದಿ

ಡೋಂಟ್ ವರಿ ಬೀ ಹ್ಯಾಪಿ-'ಮನೆ ಮಾರಾಟಕ್ಕಿದೆ' ಚಿತ್ರದ ಟೈಟಲ್ ಟ್ರ್ಯಾಕ್ ಗೆ ಶ್ರುತಿ ಹೆಜ್ಜೆ

ಸ್ಯಾಂಡಲ್ ವುಡ್ ನ ಪ್ರಮುಖ ಹಾಸ್ಯ ನಟರನ್ನೊಳಗೊಂಡ "ಮನೆ ಮಾರಾಟಕ್ಕಿದೆ" ಚಿತ್ರದಲ್ಲಿ ಮೂಗುತಿ ಸುಂದರಿ ಶ್ರುತಿ ಹರಿಹರನ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ಡೋಂಟ್ ವರಿ ಬೀ ಹ್ಯಾಪಿ-'ಮನೆ ಮಾರಾಟಕ್ಕಿದೆ' ಚಿತ್ರದ ಟೈಟಲ್ ಟ್ರ್ಯಾಕ್ ಗೆ ಶ್ರುತಿ ಹೆಜ್ಜೆ
ಶ್ರುತಿ ಹರಿಹರನ್
Published On :
ಸ್ಯಾಂಡಲ್ ವುಡ್ ನ ಪ್ರಮುಖ ಹಾಸ್ಯ ನಟರನ್ನೊಳಗೊಂಡ "ಮನೆ ಮಾರಾಟಕ್ಕಿದೆ" ಚಿತ್ರದಲ್ಲಿ ಮೂಗುತಿ ಸುಂದರಿ ಶ್ರುತಿ ಹರಿಹರನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಇದೀಗ ಚಿತ್ರದ ಆಡಿಯೋ ಬಿಡುಗಡೆಗೆ ಚಿತ್ರತಂಡ ಸಿದ್ದವಾಗಿದೆ. 
ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರದ ಮೊದಲ ಟ್ರ್ಯಾಕ್ ಈ ವಾರಾಂತ್ಯ ಬಿಡುಗಡೆಗೊಳ್ಲಲಿದೆ. ಅದುವೇ "ಡೋಂಟ್ ವರಿ ಬೀ ಹ್ಯಾಪಿ" ಎಂಬ ಹಾಡಾಗಿದ್ದು ಇದರಲ್ಲಿ ಶ್ರುತಿ, ಬೇರೆ ಹಾಸ್ಯ ನಟರು ಹಾಗೂ ಕಾರುಣ್ಯ ರಾಮ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
"ಇದೊಂದು ಕಮರ್ಷಿಯಲ್ ಸಾಂಗ್, ಅಭಿಮನ್ ರಾಯ್ ಇದರ ಸಂಗೀತ ನಿರ್ದೇಶಕರು, ವಿಜೇತ ವಿಶ್ವನಾಥನ್ ಇದರ ಗಾಯಕರು." "ಮನೆ ಮಾರಾಟಕ್ಕಿದೆ" ಚಿತ್ರದಲ್ಲಿ ಶ್ರುತಿ ಮನೆ ಮಾರಾಟ ನಡೆಸುವ ಬ್ರೋಕರ್ ಜತೆಗೆ ಸಮ್ಪರ್ಕಿಸುವ ಮನೆ ಮಾಲೀಕರ ಪಾತ್ರ ಮಾಡಿದ್ದಾರೆ.ಈ ಚಿತ್ರದಲ್ಲಿ ಸಾಧು ಕೋಕಿಲಾ, ಕುರಿ ಪ್ರತಾಪ್, ರವಿಶಂಕರ್ ಗೌಡ, ಚಿಕ್ಕಣ್ಣ ಮತ್ತು ಗಿರಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶ್ರುತಿಯವರ ಈ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿರಲಿದೆ.ಚಿತ್ರವನ್ನು ಸೆನ್ಸಾರ್ ಮಂಡಳಿ ಕಳಿಸಲಾಗಿದೆ.ನಾವು ಸೆನ್ಸಾರ್ ಪ್ರಮಾಣಪತ್ರವನ್ನು ಪಡೆದ ನಂತರ ಬಿಡುಗಡೆ ದಿನಾಂಕದ ಅಧಿಕೃತ ಪ್ರಕಟಣೆ ಮಾಡುವವರಿದ್ದೇವೆ ಎಂದು ನಿರ್ದೇಶಕ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.