ದಾಖಲೆ ಬರೆದ ಗೀತಾ; ಭಾರಿ ಬೆಲೆಗೆ ಚಿತ್ರದ ಡಿಜಿಟಲ್ ಹಕ್ಕು ಅಮೇಜಾನ್ ಪ್ರೈಮ್ ತೆಕ್ಕೆಗೆ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಗೀತಾ, ಇನ್ನೂ ಚಿತ್ರೀಕರಣ ಹಂತದಲ್ಲಿರುವಂತೆಯೇ ದಾಖಲೆ ನಿರ್ಮಾಣ ಮಾಡಿದೆ.

Published On :
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಗೀತಾ, ಇನ್ನೂ ಚಿತ್ರೀಕರಣ ಹಂತದಲ್ಲಿರುವಂತೆಯೇ ದಾಖಲೆ ನಿರ್ಮಾಣ ಮಾಡಿದೆ.
ಹೌದು.. ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತಾರಗೊಂಡಿದ್ದು, ಈ ಹಿಂದೆ ಕೆಜಿಎಫ್, ನಟ ಸಾರ್ವಭೌಮ, ಯಜಮಾನ ಚಿತ್ರಗಳ ಪಟ್ಟಿಗೆ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ ಕೂಡ ಸೇರ್ಪಡೆಯಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ಗೀತಾ ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಡಿಜಿಟಲ್ ಹಕ್ಕು ಬೇಡಿಕೆ ಸೃಷ್ಟಿಸಿಕೊಂಡಿದ್ದು, ಚಿತ್ರದ ಡಿಜಿಟಲ್ ಹಕ್ಕನ್ನು ಅಮೇಜಾನ್ ಪ್ರೈಮ್ ಸಂಸ್ಥೆ ಭಾರಿ ಮೊತ್ತ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಮೂಲಗಳ ಪ್ರಕಾರ ಸುಮಾರು 2.75 ಕೋಟಿ ರೂ ಗಳಿಗೆ ಅಮೇಜಾನ್ ಪ್ರೈಮ್ ಸಂಸ್ಥೆ ಗೀತಾ ಚಿತ್ರದ ಡಿಜಿಟಲ್ ಹಕ್ಕು ಖರೀದಿ ಮಾಡಿದೆ.
ಇನ್ನು ಗೀತಾ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಅಂತೆಯೇ ಚಿತ್ರದ ಟಾಕಿ ಪೋರ್ಷನ್ ನ ಕೆಲ ಭಾಗ ಬಾಕಿ ಇದೆ. ಗುರುವಾರ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ. ಗಣೇಶ್ ಮತ್ತು ಶಾನ್ವಿ ಶ್ರೀವಾತ್ಸವ್ ಅವರ ಮತ್ತೊಂದು ಹಾಡಿನ ಚಿತ್ರಕರಣ ಬಾಕಿ ಇದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ಇನ್ನು ಶೀಘ್ರದಲ್ಲೇ ಚಿತ್ರತಂಡ ಮೆಗಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಪ್ಲಾನ್ ಮಾಡುತ್ತಿದ್ದು, ಆಗಸ್ಟ್ ಮೊದಲ ವಾರದಲ್ಲಿ ಟ್ರೈಲರ್ ಬಿಡುಗಡೆ ಮಾಡುವ ಚಿಂತನೆಯಲ್ಲಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡಿ ದಿನಾಂಕ ಕೂಡ ಹೊರ ಬೀಳಲಿದೆ.
ಚಿತ್ರಕ್ಕೆ ಅನೂಪ್ ರುಬೆನ್ಸ್ ಅವರು ಸಂಗೀತ್ ನೀಡಿದ್ದು, ಸೈಯ್ಯದ್ ಸಲಾಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruSandalwoodಸ್ಯಾಂಡಲ್ ವುಡ್ಗೀತಾGeethaGolden Star Ganeshಗೋಲ್ಡನ್ ಸ್ಟಾರ್ ಗಣೇಶ್Amazon Primeಅಮೆಜಾನ್ ಪ್ರೈಮ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


