ವಿಜಯ್ ಜೊತೆ ಕಿಸ್ ಸೀನ್ ಬೇಡ ಅಂದಿದ್ದಕ್ಕೆ ಈ ಪಾತ್ರ ಸಾಯಿ ಪಲ್ಲವಿಗೆ ಮಿಸ್ ಆಗಿ ರಶ್ಮಿಕಾಗೆ ಸಿಕ್ಕಿದ್ದಾ?
ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕಿಸ್ಸಿಂಗ್ ಬಾಯ್ ಎಂದೇ ಖ್ಯಾತರಾಗಿದ್ದು ಇದೀಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಸಹ ತೆಲುಗಿನ ಇಮ್ರಾನ್ ಹಶ್ಮಿ ಎಂದೇ ಬಿಂಬಿತರಾಗುತ್ತಿದ್ದಾರೆ.

Published On :
ಹೈದರಾಬಾದ್: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಕಿಸ್ಸಿಂಗ್ ಬಾಯ್ ಎಂದೇ ಖ್ಯಾತರಾಗಿದ್ದು ಇದೀಗ ಟಾಲಿವುಡ್ ನಟ ವಿಜಯ್ ದೇವರಕೊಂಡ ಸಹ ತೆಲುಗಿನ ಇಮ್ರಾನ್ ಹಶ್ಮಿ ಎಂದೇ ಬಿಂಬಿತರಾಗುತ್ತಿದ್ದಾರೆ. ಅಂತೆ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಸಹ ಕಿಸ್ ದೃಶ್ಯಗಳು ಸಾಕಷ್ಟಿವೆ. ಇದಕ್ಕಾಗಿಯೇ ನಟಿ ಸಾಯಿ ಪಲ್ಲವಿ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರಂತೆ.
ಮೊದಲಿಗೆ ಡಿಯರ್ ಕಾಮ್ರೆಡ್ ಚಿತ್ರದ ಲಿಲ್ಲಿ ಪಾತ್ರಕ್ಕಾಗಿ ಸಾಯಿ ಪಲ್ಲವಿಗೆ ನಿರ್ದೇಶಕ ಭರತ್ ಕಾಮಾ ಆಫರ್ ನೀಡಿದ್ದರಂತೆ. ಚಿತ್ರದಲ್ಲಿ ಕಿಸ್ ದೃಶ್ಯಗಳ ಬಗ್ಗೆ ವಿವರಿಸಿದಾಗ ಸಾಯಿ ಪಲ್ಲವಿ ಈ ಪಾತ್ರವನ್ನು ಮಾಡಲು ನಿರಾಕರಿಸಿದ್ದರು.
ಇದಾದ ಬಳಿಕ ಭರತ್ ಕಾಮಾ ಅವರು ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ್ದ ರಶ್ಮಿಕಾ ಮಂದಣ್ಣರನ್ನೇ ಈ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಡಿಯರ್ ಕಾಮ್ರೆಡ್ ಚಿತ್ರ ಇದೇ ಜುಲೈ 26ರಂದು ತೆಲುಗು ಸೇರಿದಂತೆ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
tollywoodಟಾಲಿವುಡ್Rashmika Mandannaರಶ್ಮಿಕಾ ಮಂದಣ್ಣವಿಜಯ್ ದೇವರಕೊಂಡVijay DeverakondaDear Comradeಡಿಯರ್ ಕಾಮ್ರೆಡ್Sai Pallaviಸಾಯಿ ಪಲ್ಲವಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


