'ನನಗೆ ಮತ್ತೆ ಲವ್ವಾಗಿದೆ' ಮಾಜಿ ಗಂಡನ ಮದುವೆ ಬಳಿಕ ಅಮಲಾ ಪೌಲ್ ಅಚ್ಚರಿ ಹೇಳಿಕೆ, ಯಾರದು?
ತಮಿಳಿನ ಅಡಾಯ್ ಚಿತ್ರದಲ್ಲಿ ಅಮಲಾ ಪೌಲ್ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ...

Published On :
ತಮಿಳಿನ ಅಡಾಯ್ ಚಿತ್ರದಲ್ಲಿ ಅಮಲಾ ಪೌಲ್ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಇನ್ನು ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದ ಅಮಲಾ ಪೌಲ್ ಅವರ ಗಂಡನಿಂದ ವಿಚ್ಛೇದನೆ ಪಡೆದಿದ್ದರು. ಇದೀಗ ಮಾಜಿ ಗಂಡನ ಮದುವೆ ಬಳಿಕ ನನಗೆ ಮತ್ತೆ ಲವ್ವಾಗಿದೆ ಎಂದು ಹೇಳಿದ್ದಾರೆ.
ಅಡಾಯ್ ಚಿತ್ರದ ಕುರಿತು ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು ನನ್ನ ಸಿನಿಮಾದ ಸ್ಕ್ರಿಪ್ಟನ್ನು ನನಗೆ ಬೇಕಾದ ವ್ಯಕ್ತಿಯೊಬ್ಬರು ಕೇಳುತ್ತಾರೆ. ಆ ಮೇಲೆ ನಾನು ಅವರ ರಿಯಾಕ್ಷನ್ ಗಾಗಿ ಕಾಯುತ್ತೇನೆ. ಅವರು ಓಕೆ ಮಾಡಿದ ಮೇಲೆ ಆ ಪಾತ್ರಕ್ಕೆ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ತಯಾರಾಗುತ್ತೇನೆ ಎಂದು ಹೇಳುವ ಮೂಲಕ ತಾವು ರಿಲೇಶನ್ ಶಿಪ್ ನಲ್ಲಿರುವುದಾಗಿ ಹೇಳಿದ್ದಾರೆ.
ನಿರ್ದೇಶಕ ವಿಜಯ್ ಜೊತೆ ಅಮಲಾ ಪೌಲ್ ವಿವಾಹವಾಗಿದ್ದರು. ಆದರೆ ಒಂದು ವರ್ಷದಲ್ಲೇ ಇಬ್ಬರು ವಿಚ್ಛೇದನ ಪಡೆದು ದೂರವಾದರು. ಈಗ ಅಮಲಾ ವ್ಯಕ್ತಿಯೊಬ್ಬರೊಂದಿಗೆ ರಿಲೇಶನ್ ಶಿಪ್ ನಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಆ ವ್ಯಕ್ತಿ ಯಾರು ಎಂಬುದು ಇದೀಗ ತೀವ್ರ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


