ಸಿನಿಮಾ ಸುದ್ದಿ

ಲಂಡನ್​ನಲ್ಲಿ ಶಿವಣ್ಣ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ: ವಿಶ್ರಾಂತಿ, ನಾಳೆ ಜನ್ಮದಿನ ಆಚರಣೆಗೆ ಅಲಭ್ಯ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಹಾರೈಕೆ ಫಲಿಸಿದ್ದು, ಲಂಡನ್ ನಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಶುಕ್ರವಾರ ಜುಲೈ 12ರಂದು ಅವರ ಜನ್ಮದಿನಕ್ಕೂ...

ಲಂಡನ್​ನಲ್ಲಿ ಶಿವಣ್ಣ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ: ವಿಶ್ರಾಂತಿ, ನಾಳೆ ಜನ್ಮದಿನ ಆಚರಣೆಗೆ ಅಲಭ್ಯ!
ಶಿವರಾಜ್ ಕುಮಾರ್
Published On :
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಹಾರೈಕೆ ಫಲಿಸಿದ್ದು, ಲಂಡನ್ ನಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ  ಶುಕ್ರವಾರ ಜುಲೈ 12ರಂದು ಅವರ ಜನ್ಮದಿನಕ್ಕೂ ಮೊದಲೇ ಬಂದಿರುವ ಈ ಸಿಹಿ ಸುದ್ದಿ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ ಆದರೆ ಬರ್ತ್ ಡೇ ಗೆ ಲಭ್ಯವಿರುವುದಿಲ್ಲ ಎಂಬ ನೋವು ಕಾಡುತ್ತಿದೆ
ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಕೆಲ ದಿನಗಳ ಹಿಂದೆಯಷ್ಟೇ, ಶಸ್ತ್ರ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ್ದರು. ಬುಧವಾರ ಶಿವಣ್ಣನವರಿಗೆ ಶಸ್ತ್ರ ಚಿಕಿತ್ಸೆ ನಡೆದು ಆಫರೇಶನ್​ ಯಶಸ್ವಿಯಾಗಿದ್ದು, ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆಯಂತೆ.
ಶಿವಣ್ಣ ಆರೋಗ್ಯವಾಗಿದ್ದಾರೆ, ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಶಿವಣ್ಣ ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್​ ಟ್ವಿಟರ್​ ಖಾತೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ಶಿವರಾಜ್ ಕುಮಾರ್ ಜೊತೆಗೆ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ಪುತ್ರಿ ನಿವೇದಿತಾ ಕೂಡ ಲಂಡನ್​ಗೆ ತೆರಳಿದ್ದಾರೆ ಪುನೀತ್ ರಾಜಕುಮಾರ್ ಕೂಡ ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.
ಕಳೆದ 6 ತಿಂಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಮದಲ್ಲಿ ಜಾರಿ ಬಿದ್ದು ಶಿವಣ್ಣ ಗಾಯಗೊಂಡಿದ್ದು, ಆ ವೇಳೆ ಅವರಿಗೆ ಭುಜದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶೂಟಿಂಗ್​ ಮುಗಿಸಿದ ಶಿವಣ್ಣ ಹುಟ್ಟುಹಬ್ಬ ಆಚರಣೆಯನ್ನು ಕೈಬಿಟ್ಟು ಆಪರೇಶನ್​ಗಾಗಿ ಲಂಡನ್​ಗೆ ತೆರಳಿದ್ದರು. 
ಇನ್ನು ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನ ಬಾಲಿವುಡ್ ನಟ ಅರ್ಬಾಜ್ ಖಾನ್ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.